ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. 
ಜಿಲ್ಲೆ

ಏಕತೆಗಾಗಿ ಜೀವತೆತ್ತ ಸ್ವತಂತ್ರ ಭಾರತದ ಮೊದಲ ಬಲಿದಾನಿ

ಬಾಗಲಕೋಟೆ: ಹಿಂದುತ್ವ ಈ ದೇಶದ ಆತ್ಮ ಎಂದು ಸಾರಿದ ಶ್ಯಾಮಪ್ರಸಾದ ಮುಖರ್ಜಿ ಅವರು ಭಾರತದ ಏಕತೆಗಾಗಿ ಜಿವತೆತ್ತ
ಸ್ವತಂತ್ರ ಭಾರತದ ಮೊದಲ ಬಲಿದಾನಿ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ಅವರು ನಗರದ ಶಿವಾನಂದ ಜಿನನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮದಿನಾಚರನೆಯ ನಿಮಿತ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ವಂದನೆ ಸಲ್ಲಿಸಿ ಮಾತನಾಡಿದರು.

ಡಾ.ಶ್ಯಾಮಪ್ರಸಾದ ಮುಖರ್ಜಿ ಅವರು ಭಾರತದ ಏಕತೆಗಾಗಿ ಜೀವತೆತ್ತ ಸ್ವತಂತ್ರ ಭಾರತದ ಮೊದಲ ಬಲಿದಾನಿಯಾದವರು, ಪ್ರಖರ ರಾಷ್ಟ್ರೀಯವಾದಿ, ದೇಶದ ಅಖಂಡತೆಗಾಗಿ ಶ್ರಮಿಸಿದ ಅವರು ಹಿಂದುತ್ವ ಈ ದೇಶದ ಆತ್ಮ ಎಂದು ಸಾರಿದವರು, ಇಂದು ಅವರ ದೇಶಪ್ರೇಮ ನಮಗೆಲ್ಲಾ ಆದರ್ಶ ಎಂದರು.

ಮಾಜಿ ಶಾಸಕರಾದ ಡಾ.ವೀರಣ್ಣ ಚರಂತಿಮಠ ಮಾತನಾಡಿ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರು ಭಾರತೀಯ ಜನಸಂಘದ ಸಂಸ್ಥಾಪಕರಾಗಿದ್ದವರು,
ಒಂದು ರಾಷ್ಟ್ರ ಒಂದು ಧ್ವಜ ಘೋಷಣೆಯೊಂದಿಗೆ ರಾಷ್ಟ್ರೀಯ ಐಕ್ಯತೆ, ಹಾಗೂ ಕಾಶ್ಮೀರಕ್ಕಾಗಿ ಹೋರಾಡಿದ ಮುಖರ್ಜಿ ಅವರ ದೇಶಭಕ್ತ ವಿಚಾರಧಾರೆಗಳು ಕೋಟ್ಯಂತರ ಕಾರ್ಯಕರ್ತರಿಗೆ ಸರ್ವಕಾಲಿಕ ಪ್ರೇರಣೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಜಿ.ಎನ್.ಪಾಟೀಲ. ಡಾ.ಎಮ್.ಎಸ್.ದಡ್ಡೆನ್ನವರ, ಲಕ್ಷ್ಮೀ ನಾರಾಯಣ ಕಾಸಟ್,ಗುಂಡುರಾವ ಶಿಂಧೆ, ಕೇಶವ ಭಜಂತ್ರಿ, ರಾಜು ನಾಯ್ಕರ, ಸತ್ಯನಾರಾಯಣ ಹೇಮಾದ್ರಿ, ಶಿವಾನಂ ಟವಳಿ, ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ನಗರಸಭೆ ಸದಸ್ಯೆ ಜ್ಯೋತಿ ಭಜಂತ್ರಿ, ಉಮೇಶ ಹಂಚಿನಾಳ, ಬಸವರಾಜ ಅವರಾಧಿ, ಸಂಗಮೇಶ ಹಿತ್ತಲಮನಿ, ಸೇರಿದಂತೆ ಅನೇಕರು ಇದ್ದರು.