ಬಾಗಲಕೋಟೆ: ಬಜೆಪಿಯಿಂದ ಯತ್ನಾಳ್ ಉಚ್ಛಾಟನೆ ಬಳಿಕ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಯತ್ನಾಳ್ ಪರ ಬ್ಯಾಟಿಂಗ್ ಮಾಡುತ್ತಿದ್ದಂತೆ ಪಂಚಾಮಸಾಲಿ ಸಮಾಜದಲ್ಲಿ ಸ್ವಾಮೀಜಿ ಪರ-ವಿರುದ್ಧವಾಗಿ ಆರೋಪ ಪ್ರತ್ಯಾರೋಪಗಳು ದಟ್ಟವಾಗಿ ಪ್ರತಿಧ್ವನಿಸುತ್ತಿವೆ. ಈ ಮಧ್ಯ ಪೀಠದಿಂದ ಸ್ವಾಮೀಜಿಗೆ ನೋಟಿಸ್ ಕೊಡುವ ಬಗ್ಗೆಯೂ ಟ್ರಸ್ಟಿಗಳು ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಬಿಸಿಬಿಸಿ ಚರ್ಚೆಗೆ ನಾಂದಿ ಹಾಡಿದ್ದಾರೆ.
ಇದೀಗ ಪಂಚಮಸಾಲಿ ಸಮಾಜದ ರಾಷ್ಟಿçÃಯ ಅಧ್ಯಕ್ಷ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟಿ ವಿಜಯಾನಂದ ಕಾಶಪ್ಪನವರ ಭಾನುವಾರ ಇಳಕಲ್ಲ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಇದೇ ಏಪ್ರಿಲ್ ೨೨ ರಂದು ಹುಬ್ಬಳ್ಳಿಯಲ್ಲಿ ಕೂಡಲಸಂಗಮ ಪಂಚಮಸಾಲಿ ಟ್ರಸ್ಟ್ ಸಭೆ ನಡೆಸಲಿದ್ದು, ಅಂದಿನ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಅ0ದು ನಡೆಯುವ ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲ ಪಕ್ಷದ ಪಂಚಮಸಾಲಿ ಮುಖಂಡರು, ಟ್ರಸ್ಟ್ ಆಡಳಿತ ಮಂಡಳಿ ಸದಸ್ಯರು, ಅಧ್ಯಕ್ಷರು ಎಲ್ಲರೂ ಇರುತ್ತಾರೆ ಎಂದು ಹೇಳಿದರು.
ಕೂಡಲಸಂಗಮದಲ್ಲಿ ಇರುವ ಪಂಚಮಸಾಲಿ ಪೀಠದ ಕಟ್ಟಡವನ್ನು ಟ್ರಸ್ಟ್ನವರು ಹಿಂಪಡೆದರೆ ಅದೇ ಕೂಡಲಸಂಗಮದಲ್ಲಿ ಪರ್ಯಾಯ ಜಾಗ ಖರೀದಿ ಖರೀದಿಸಿ ಸ್ವಾಮೀಜಿಗೆ ಮಠ ಕಟ್ಟಿಸಿಕೊಡುತ್ತೇವೆ ಎಂದಿರುವ ಸಮಾಜದ ಮುಖಂಡ, ನರಗುಂದ ಶಾಸಕ ಸಿ.ಸಿ.ಪಾಟೀಲ ಹೇಳಿಕೆಗೂ ತಿರುಗೇಟು ನೀಡಿರುವ ಕಾಶಪ್ಪವನರ, ಅವರು ಪರ್ಯಾಯ ಪೀಠ ಮಾಡಲಿ. ಸ್ವಾಮೀಜಿಗೆ ಹೈಟೆಕ್ ರೂಮ್, ಐಶಾರಾಮಿ ಕಾರು ಕೊಡೆಸಲಿ, ಬೇಡ ಎಂದವರು ಯಾರು ಎಂದು ವ್ಯಂಗ್ಯವಾಡಿದರು.
ಬಿಜೆಪಿ ಸರ್ಕಾರ ಇದ್ದಾಗ ಹೆಗಲಿಗೆ ಬಾರಕೋಲು ಹಾಕಿಕೊಂಡು ಪಾದಯಾತ್ರೆ ಮಾಡಿದ್ದ ಕಾಶಪ್ಪನವರು ತಮ್ಮ ಪಕ್ಷ ಅಽಕಾರಕ್ಕೆ ಬರುತ್ತಿದ್ದಂತೆ ಆ ಬಾರಕೋಲು ಎಲ್ಲಿ ಇಟ್ಟಿದ್ದಾರೋ ಎಂದು ಪ್ರಶ್ನಿಸಿದ್ದ ಸಿ.ಸಿ.ಪಾಟೀಲ ಟೀಕೆಗೆ ಪ್ರತಿಕ್ರಿಯಿಸಿದ ಕಾಶಪ್ಪನವರ, ಈಗಲೂ ನನ್ನ ಬಳಿ ಬಾರಕೋಲು ಇವೆ. ಒಂದಲ್ಲ, ನಾಲ್ಕು ಬಾರಕೋಲು ಇವೆ. ಅವುಗಳನ್ನು ನಿಮ್ಮಂತವರಿಗೆ ಎಂದೇ ಇಟ್ಟುಕೊಂಡಿದ್ದೇನೆ. ಅವಶ್ಯಕತೆ ಬಂದಾಗ ಅವುಗಳನ್ನು ಹೊರಗೆ ತೆಗೆಯುತ್ತೇನೆ. ಪಾದಯಾತ್ರೆ ವೇಳೆ ಇಬ್ಬರು ಸಚಿವರಿಗಾಗಿ ಬಾರಕೋಲು ತೆಗೆದಿದ್ದೆ ಎಂದು ಚುಚ್ಚಿದರು.
ಸಿ.ಸಿ.ಪಾಟೀಲ ಈಗ ಬಂದವರು, ಅವರಿಂದ ನಮ್ಮ ಸಮಾಜಕ್ಕೆ ಏನು ಕೊಡುಗೆ ಇದೆ? ನಮ್ಮ ತಂದೆಯವರು ಮಾಡಿಸ ಸಮಾಜ ಸಂಘಟನೆಯಿAದಾಗಿ ಇವರೆಲ್ಲ ಶಾಸಕರಾಗಿದ್ದಾರೆ. ನಾನು ಪಂಚಮಸಾಲಿ ಸಮಾಜದ ಮೀಸಲಾತಿಗಾಗಿ ಕೂಡಲಸಂಗಮದಿAದ ಬೆಂಗಳೂರ ವರೆಗೂ ಪಾದಯಾತ್ರೆ ಮಾಡಿದ್ದೇನೆ. ಇವರು(ಸಿ.ಸಿ.ಪಾಟೀಲ) ಎಷ್ಟು ಕಿ.ಮೀ. ನಡೆದಿದ್ದಾರೆ? ನಾವು ನಮ್ಮ ತಂದೆಯ ಕಾಲದಿಂದಲೂ ಸಮಾಜದ ಸಂಘಟನೆಗಾಗಿ ದುಡಿದಿದ್ದೇವೆ. ಆಗ ಇವರ ಎಲ್ಲಿದ್ದರು ಎಂದು ಖಾರವಾಗಿ ಪ್ರಶ್ನಿಸಿದರು.