ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿತ್ತಲಿ ಮನ್ನಿಕಟ್ಟಿಯ ಸಿದ್ಧಲಿಂಗೇಶ್ವರ ವಿರಕ್ತಮಠದ ಪೀಠಾಽಪತಿ ಶಿವಕುಮಾರ ಸ್ವಾಮೀಜಿ ಮಾತನಾಡಿದರು. ಮುಖಂಡರಾದ ಅಶೋಕ ಲಾಗಕೋಟಿ, ರಂಗನಗೌಡ ದಂಡನ್ನವರ, ಶಿವಕುಮಾರ ನಂದಿಕೋಲಮಠ, ವಿರೇಶ ಹಿರೇಮಠ ಉಪಸ್ಥಿತರಿದ್ದರು. 
ಜಿಲ್ಲೆ

ಏ.೨೦ ರಂದು ಪಂಚಮುಖಿ ಶಿವ ದೇವಾಲಯ ಲೋಕಾರ್ಪಣೆ

ಬಾಗಲಕೋಟೆ: ಬಾದಾಮಿ ತಾಲೂಕಿನ ಕಿತ್ತಲಿ ಗ್ರಾಮದಲ್ಲಿ ನೂತನವಾಗಿ ಸಿದ್ದಲಿಂಗೇಶ್ವರ ವಿರಕ್ತಮಠ ಮತ್ತು ಪಂಚಮುಖಿ ಶಿವ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ, ಸಾಮೂಹಿಕ ವಿವಾಹ ಸಮಾರಂಭ ಏ.೨೦ ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಿತ್ತಲಿ ಮನ್ನಿಕಟ್ಟಿಯ ಸಿದ್ಧಲಿಂಗೇಶ್ವರ ವಿರಕ್ತಮಠದ ಪೀಠಾಽಪತಿ ಶಿವಕುಮಾರ ಸ್ವಾಮೀಜಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗೀನ ದಿನಮಾನದಲ್ಲಿ ಆಧ್ಯಾತ್ಮದ ಕೊರತೆ ಕಾಡುತ್ತಿದೆ. ನನ್ನ ಸ್ವಗ್ರಾಮವಾದ ಕಿತ್ತಲಿಯಲ್ಲಿ ಸಿದ್ಧಲಿಂಗೇಶ್ವರ ವಿರಕ್ತಮಠ ಹಾಗೂ ಪಂಚಲಿAಗ ಶಿವದೇವಾಲಯ ನಿರ್ಮಿಸಲಾಗಿದೆ. ಇದೇ ಸಂದರ್ಭದಲ್ಲಿ ೧೫ ಕ್ಕೂ ಹೆಚ್ಚು ಜೋಡಿಗಳ ಸಾಮೂಹಿಕ ವಿವಾಹ ನಡೆಯಲಿದೆ ಎಂದರು.

ಬೆಳಗ್ಗೆ ೯ ಗಂಟೆಗೆ ಷಟಸ್ಥಲ ಧ್ವಜಾರೋಹಣ, ಶೋಭಾಯಾತ್ರೆ ನಡೆಯಲಿದೆ. ಬೈರನಹಟ್ಟಿ ಶಿರೋಳ ಶಾಂತಲಿAಗ ಸ್ವಾಮೀಜಿ, ಹರನಾಳ ಮಹಾಂತ ಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದ ಪಿ.ಸಿ.ಗದ್ದಿಗೌಡರ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಉದ್ಘಾಟಿಸಲಿದ್ದಾರೆ, ತಾ.ಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡರ, ಉದ್ದಿಮೆದಾರ -Àಕೀರಗೌಡ ಹಿರೇನಿಂಗನಗೌಡರ ಇತರರು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.

ಮಧ್ಯಾಹ್ನ ೧೨ ಗಂಟೆಗೆ ಧರ್ಮ ಸಭೆ ನಡೆಯಲಿದ್ದು, ಶಿರಹಟ್ಟಿ ಬಾಲೆಹೊಸೂರಿನ ಭಾವೈಕ್ಯತಾ ಮಹಾಪೀಠದ ಜಗದ್ಗುರು  ದಿಂಗಾಲೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖಂಡರಾದ ಅಶೋಕ ಲಾಗಕೋಟಿ, ರಂಗನಗೌಡ ದಂಡನ್ನವರ, ಶಿವಕುಮಾರ ನಂದಿಕೋಲಮಠ, ವಿರೇಶ ಹಿರೇಮಠ ಉಪಸ್ಥಿತರಿದ್ದರು.