ಜಿಲ್ಲೆ

ಏ. ೧೯ಕ್ಕೆ ಕೂಡಲಸಂಗಮದಲ್ಲಿ ಟ್ರಸ್ಟಿಗಳು, ಪ್ರಮುಖರ ಸಭೆ ಫಿಕ್ಸ್ !

ಬಾಗಲಕೋಟೆ: ವಿಜಯಪುರ ಶಾಸಕ ಯತ್ನಾಳ್ ಪರವಾಗಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬ್ಯಾಟಿಂಗ್ ಆರಂಭಿಸಿದ ಬೆನ್ನಲ್ಲೆ ಸ್ವಾಮೀಜಿ ವಿರುದ್ಧ ಪರ-ವಿರೋಧ ವ್ಯಕ್ತವಾಗಿ ಸಮಾಜದಲ್ಲಿ ನಡೆಯುತ್ತಿರುವ ಗೊಂದಲ ತೀವ್ರಗೊಳ್ಳುತ್ತಿದೆ.

ಸ್ವಾಮೀಜಿ ನಡೆಯ ವಿರುದ್ಧ ಕೂಡಲಸಂಗಮ ಪೀಠದ ಟ್ರಸ್ಟಿಗಳು ಸೂಕ್ತ ನಿರ್ಧಾರ ಕೈಗೊಳ್ಳುವ ಬಗ್ಗೆ ಏ. ೨೨ ರಂದು ಹುಬ್ಬಳ್ಳಿಯಲ್ಲಿ ಸಭೆ ಕರೆದ ಬೆನ್ನಲ್ಲೆ ಅದಕ್ಕೆ ಶೆಡ್ಡು ಹೊಡೆಯುವಂತೆ ಸ್ವಾಮೀಜಿ ಸಹ ಅದಕ್ಕೂ ಮುನ್ನ ಏ. ೨೦ರಂದು ಕೂಡಲಸಂಗಮದಲ್ಲೆ ಸಮಾಜದ ರಾಜ್ಯ ಮಟ್ಟದ ಭಕ್ತರ ಸಭೆ ನಡೆಸುವುದಾಗಿ ಸೋಮವಾರ ಘೋಷಿಸಿದ್ದರು.

ಇದೀಗ ಇದಕ್ಕೆ ತಿರುಗೇಟು ಎನ್ನುವಂತೆ ಟ್ರಸ್ಟಿಗಳು ಹಾಗೂ ಪ್ರಮುಖ ರಾಜ್ಯಮಟ್ಟದ ಸಭೆಯನ್ನು ಏ. ೨೨ ರ ಬದಲಿಗೆ ಏ. ೧೯ರಂದು ಅದೇ ಕೂಡಲಸಂಗಮದಲ್ಲಿ ಸಭೆ ಕರೆದು ಅಂದು ಸ್ವಾಮೀಜಿ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಟ್ರಸ್ಟಿಗಳ ಪರವಾಗಿ ಇರುವ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಬೆಂಬಲಿಗರೂ ಪ್ರತಿತಂತ್ರ ರೂಪಿಸುತ್ತಿದ್ದಾರೆ.

ಬಾಗಲಕೋಟೆಯಲ್ಲಿ ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಪಂಚಮಸಾಲಿ ಸಮಾಜದ ಮುಖಂಡ ಅಮರೇಶ್ ನಾಗೂರ, ಈ ಮೊದಲು ಹುಬ್ಬಳ್ಳಿಯಲ್ಲಿ ಫಿಕ್ಸ್ ಆಗಿದ್ದ ಸಭೆಯನ್ನು ಏ. ೧೯ ರಂದು ಬೆಳಗ್ಗೆ ೧೧.೩೦ಕ್ಕೆ ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ರಾಜ್ಯಮಟ್ಟದ ಪಂಚಮಸಾಲಿ ಸಮಾಜದ ಸಭೆ ಕರೆಯಲಾಗಿದೆ. ಪೀಠದ ಟ್ರಸ್ಟಿಗಳ ಜೊತೆಗೆ ಸಮಾಜದ ಹಾಲಿ, ಮಾಜಿ ಶಾಸಕರು, ಸಚಿವರು, ಸಮಾಜದ ಹಿರಿಯರು, ಯುವಮುಖಂಡರು, ಜಿಲ್ಲಾ, ತಾಲೂಕು ಘಟಕಗಳ ಪದಾಽಕಾರಿಗಳು ಸಭಾಗವಹಿಸಲಿದ್ದಾರೆ ಎಂದರು.

ಅಂದಿನ ಸಭೆಯಲ್ಲಿ ೨ಎ ಮೀಸಲಾತಿ ಹೋರಾಟ ಹಾಗೂ ಶ್ರೀಗಳ ಗೊಂದಲ ಹೇಳಿಕೆಗಳ ಬಗ್ಗೆಯೂ ಚರ್ಚೆ ನಡೆಯಲಿದ್ದು, ಸಮಾಜವು ಒಂದು ದಿಟ್ಟ ನಿರ್ಧಾರ ಕೈಗೊಳ್ಳಿದೆ ಎಂದು ತಿಳಿಸಿದರು.

ಕೂಡಲಸಂಗಮ ಕ್ಷೇತ್ರದಲ್ಲಿ ಲಿಂಗಾಯತ ಪಂಚಮಸಾಲಿ ಪೀಠವನ್ನು ಸ್ಥಾಪನೆ ಮಾಡಿ ಬಸವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಪೀಠಾಽಪತಿ ಮಾಡಿದ್ದೇವು. ಆದರೆ, ಕೆಲವು ವರ್ಷಗಳಿಂದ ಸ್ವಾಮೀಜಿ ಪೀಠವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ೨ಎ ಮೀಸಲಾತಿ ಹೋರಾಟಕ್ಕೆ ಸಂಬAಽಸಿದAತೆ ಒಂದು ಪಕ್ಷದವಂತೆ ನಡೆದುಕೊಳ್ಳುತ್ತಿದ್ದಾರೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದರು.

ಮೀಸಲಾತಿ ಹೋರಾಟ ಆರಂಭದಲ್ಲಿ ಪಕ್ಷಾತೀತವಾಗಿ ಮಾಡುತ್ತಿದ್ದೇವು. ಆದರೆ, ಈಗ ಸಮಾಜವನ್ನು ದಿಕ್ಕು ತಪ್ಪಿಸುತ್ತಾ ಒಂದು ಪಕ್ಷದ ಕಡೆಗೆ ವಾಲಿಸಿದ್ದಾರೆ. ಪಂಚಮಸಾಲಿ ಸಮಾಜದ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವುದು ಪೂಜ್ಯರ ಕೆಲಸವಾಗಿದೆ. ಶ್ರೀಗಳು ಒಗ್ಗಟ್ಟು ಮುರಿದು ಗೊಂದಲ ಉಂಟು ಮಾಡುತ್ತಿದ್ದಾರೆ. ಇತ್ತೀಚಿಗೆ ಬಿಜೆಪಿಯಿಂದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಉಚ್ಛಾಟಿನೆ ಮಾಡಿದ್ದನ್ನು ಶ್ರೀಗಳು ಖಂಡಿಸಲಿ.

ಅದನ್ನು ಬಿಟ್ಟು ಅವರ ಏಜಂಟರAತೆ ವರ್ತಿಸುತ್ತಿದ್ದಾರೆ. ಅವರ ಪರವಾಗಿ ನಿಲ್ಲುವುದು ಎಷ್ಟು ಸರಿ? ಶ್ರೀಪೀಠ ಸ್ಥಾಪನೆ ಮಾಡಿದ್ದು ಸಮಾಜ ಎಲ್ಲ ಬಾಂಧವರನ್ನು ವಿಶ್ವಾಸದಿಂದ ತೆಗೆದುಕೊಂಡು ಹೋಗಲು. ಅದು ಯಾವುದೇ ಒಂದು ಕುಟುಂಬಕ್ಕೆ ಸೀಮಿತವಾಗಿಲ್ಲ. ಹೀಗಾಗಿ ಸ್ವಾಮೀಜಿ ಅವರು ಪೀಠವನ್ನು ದುರ್ಬಳಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಸಂಗಣ್ಣ ಗಂಜಿಹಾಳ, ಗಂಗಣ್ಣ ಬಾಗೇವಾಡಿ, ಶಿವಾನಂದ ಘಂಟಿ, ಸಿದ್ದಪ್ಪ ಹೊಸೂರ, ಮಂಜುನಾಥ ಪುರ್ತಗೇರಿ, ಚನ್ನವೀರ ಅಂಗಡಿ ಇದ್ದರು.