ಹಾಸನ : ಜಿಲ್ಲಾ ಬ್ಯಾಸ್ಕೆಟ್ ಬಾಲ್ ಸಂಸ್ಥೆ ಹಾಗೂ ಹೊಯ್ಸಳ ಬ್ಯಾಸ್ಕೆಟ್‌ಬಾಲ್ ಕ್ಲಬ್ ವತಿಯಿಂದ ದಿ.ವಿ.ಸತೀಶ್ ಅವರ ಸ್ಮರಣಾರ್ಥ ಏ.15ರಿಂದ ಎರಡು ದಿನಗಳ ರಾಜ್ಯಮಟ್ಟದ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಹೊಯ್ಸಳ ಬ್ಯಾಸ್ಕೆಟ್‌ಬಾಲ್ ಕ್ಲಬ್ ಅಧ್ಯಕ್ಷ ರವಿನಾಕಲಗೂಡು ತಿಳಿಸಿದರು.
ರಾಜ್ಯ ಮಟ್ಟದ ಗ್ರಾಮೀಣ ಬ್ಯಾಸ್ಕೆಟ್ ಬಾಲ್ ಆಹ್ವಾನಿತ ಪಂದ್ಯಾವಳಿ ಯನ್ನು ಹಮ್ಮಿಕೊಳ್ಳಲಾಗಿದ್ದು, ಏ.15ರ ಬೆಳಗ್ಗೆ 11ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಗುವುದು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಎರಡು ದಿನಗಳ ಕ್ರೀಡಾಕೂಟ ದಲ್ಲಿ ರಾಜ್ಯ ವಿವಿಧ ಜಿಲ್ಲೆಗಳಿಂದ 15ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿವೆ. ಹೊನಲು-ಬೆಳಕಿನ ಪಂದ್ಯಾವಳಿ ಇದಾಗಿದ್ದು, ಪ್ರಥಮ ಸ್ಥಾನ ಪಡೆದ ತಂಡಕ್ಕೆ 25 ಸಾವಿರ ನಗದು, ದ್ವಿತೀಯ ಬಹುಮಾಮನ 15 ಸಾವಿರ ಹಾಗೂ ತೃತೀಯ ಬಹುಮಾನ 7,500 ರೂ.ಗಳನ್ನು ನೀಡಲಾ ಗುವುದು. ಪ್ರವೇಶ ಶುಲ್ಕವಾಗಿ ಒಂದು ತಂಡಕ್ಕೆ 2500 ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬ್ಯಾಸ್ಕೆಟ್‌ಬಾಲ್ ತಂಡವನ್ನು ಕಟ್ಟಿದ ಕೀರ್ತಿ ವಿ.ಸತೀಶ್‌ಗೆ ಸಲ್ಲುತ್ತದೆ. ಅವರು ನಿಧನರಾದ ಮೇಲೆ ಕ್ರೀಡಾ ಚಟುವಟಿಕೆಗಳು ಹೆಚ್ಚಾಗಿ ನಡೆ ಯುತ್ತಿಲ್ಲ. ಆದ್ದರಿಂದ ಇನ್ನು ಮುಂದೆ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಹೆಚ್ಚೆಚ್ಚು ಕ್ರೀಡೆಗಳನ್ನು ನಮ್ಮ ಸಂಸ್ಥೆ ವತಿಯಿಂದ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೊಯ್ಸಳ ಬ್ಯಾಸ್ಕೆಟ್‌ಬಾಲ್ ಕ್ಲಬ್‌ನ ಪದಾಧಿಕಾರಿಗಳಾದ ಸೋಮಶೇಖರ್, ಪುರುಷೋ ತ್ತಮ್, ಶ್ರೀನಿವಾಸ್, ರಮೇಶ್, ಪ್ರೇಮ್‌ಕುಮಾರ್ ಹಾಜರಿದ್ದರು.