ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸಿ ಶ್ರೀರಾಮ ಸೇನಾ ಪದಾಧಿಕಾರಿಗಳು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು. ರವಿಕುಮಾರ ಕೋಕಿತ್ಕರ, ವಿನಯ ಅಂಗ್ರೊಳ್ಳಿ, ವಿಠ್ಠಲ ಗಡಗಿ, ವಿನಾಯಕ ಹಂಗಿರಣೆಕರ ಇತರರಿದ್ದರು. 
ಜಿಲ್ಲೆ

ಎಸ್‌ಡಿಪಿಐ, ಪಿಎಫ್‌ಐ ನಿಷೇಧಿಸಲು ಆಗ್ರಹ

Belagavi

ಬೆಳಗಾವಿ: ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಶ್ರೀರಾಮ ಸೇನಾ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.

ಎಸ್‌ಡಿಪಿ, ಪಿಎಫ್‌ಐ ಸಂಘಟನೆಗಳು ಭಾರತ ವನ್ನು 2047ರ ಹೊತ್ತಿಗೆ ಇಸ್ಲಾಮೀಕರಣಗೊಳಿಸುವ ಗುರಿ ಹೊಂದಿವೆ ಎಂದು ಆರೋಪಿಸಿದರು. ದೇಶದ್ರೋಹಕ್ಕೆಂದು ಆಂತರಿಕ ಸೈನಿಕ ಶಕ್ತಿಯನ್ನು ಪಿಎಫ್‌ಐ ನಿರ್ಮಿಸಿದೆ. ದೇಶದ ಸಿಎಎ, ಎನ್‌ಆರ್‌ಸಿ, ರೈತರ ಹೋರಾಟ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹಿಂಸಾತ್ಮಕ ಗಲಭೆಗಳಲ್ಲಿ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಪಾತ್ರವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಯ ಸಂಚು ಸಿದ್ಧಗೊಳಿಸಿದ್ದು ಬಿಹಾರದಲ್ಲಿ ಬಯಲಾಗಿದೆ. ಜಗತ್ತಿನ ಬಹುತೇಕ ಮುಸ್ಲಿಂ ರಾಷ್ಟ್ರಗಳಿಂದ ಈ ಎರಡೂ ಸಂಘಟನೆಗೆ ಕೋಟ್ಯಂತರ ರೂ. ಜಮಾ ಆಗುತ್ತಿದೆ ಎಂದು ಆರೋಪಿಸಿದರು.

ಕೂಡಲೇ ಈ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಶ್ರೀರಾಮ ಸೇನಾ ಪದಾಧಿಕಾರಿಗಳು ಒತ್ತಾಯಿಸಿದರು. ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ರವಿಕುಮಾರ ಕೋಕಿತ್ಕರ, ವಿನಯ ಅಂಗ್ರೋಳ್ಳಿ, ವಿಠ್ಠಲ ಗಡಗಿ, ವಿನಾಯಕ ಹಂಗಿರಣೆಕರ ಇತರರಿದ್ದರು.