ಜಿಲ್ಲೆ

ಎಸ್‌ಎಸ್‌ಐಟಿ ಹಳೆಯ ವಿದ್ಯಾರ್ಥಿಗಳ ಸವಾಗಮ

ತುಮಕೂರು : ನಗರದ ಶ್ರೀಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸವಾಗಮ ‘ಸೇತುಬಂಧ 2020’ ಮಹಾಸಭೆ ಭಾನುವಾರ ನಡೆಯಿತು.

ನಗರದ ಎಸ್‌ಎಸ್‌ಐಟಿ ಕ್ಯಾಂಪಸ್‌ನ ಪಿಜಿ ಸಭಾಂಗಣದಲ್ಲಿ 1996ರಲ್ಲಿ ಅಧ್ಯಯನ ವಾಡಿದ 25ನೇ ವರ್ಷದ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಬಾಹ್ಯಾಕಾಶ ವಿಜ್ಞಾನಿ ಬಿ.ಜಿ.ಸುನಿಲ್ ವಾತನಾಡಿ, ಸಿದ್ಧಾರ್ಥ ಇಂಜಿನಿಯರಿಂಗ್ ರಾಷ್ಟ್ರದ ಪ್ರಧಾನ ಸಂಸ್ಥೆಗಳಲ್ಲಿ ಒಂದಾಗಿದೆ, ನಮಗೆ ವೃತ್ತಿಪರತೆ ನೀಡಿರುವ ಸಂಸ್ಥೆಯ ಬಗ್ಗೆ ನಮಗೆ ಧನ್ಯತಾಭಾವ ಮೂಡಿದೆ ಎಂದರು.

ಪ್ರಾಂಶುಪಾಲ ಡಾ.ಎಂ.ಎಸ್‌ರವಿಪ್ರಕಾಶ್ ವಾತನಾಡಿ, ಸವಾಜ ಮತ್ತು ದೇಶದ ಅಭಿವೃದ್ಧಿಗೆ ಋಣ ಸಂದಾಯ ವಾಡುವ ಮನೋಧರ್ಮ ಎಲ್ಲರಲ್ಲೂ ಬರಬೇಕು, ಸಂಸ್ಥೆಯಿಂದ ಕಲಿತಿದ್ದೀರಿ, ಪಡೆದಿದ್ದೀರಿ, ಅದನ್ನು ವಾಪಸ್ ಸವಾಜಕ್ಕೆ ನೀಡಬೇಕು. ಬಡಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಾಯ ವಾಡುವ ಗುರುತರ ಜವಾಬ್ದಾರಿ ಮತ್ತು ಗುಣವನ್ನು ಬಳಸಿಕೊಳ್ಳಿ ಎಂದರು.

ಸಾಹೇ ರಿಜಿಸ್ಟ್ರಾರ್ ಡಾ.ಎಂ.ಝಡ್‌ಕುರಿಯನ್ ವಾತನಾಡಿ, ಕಾಲೇಜು ಜೀವನದಲ್ಲಿ ಕೇವಲ ಪಠ್ಯವಷ್ಟೆ ಅಲ್ಲದೆ ಇನ್ನಿತರ ಚಟುವಟಿಕೆಗಳಲ್ಲಿ ಸಕ್ರಿಯವಾಗುವುದರ ಮೂಲಕ ನೆನಪು ದಾಖಲಾಗುವಂತೆ ವಾಡಿಕೊಳ್ಳುವುದೇ ನಿಜವಾದ ವಿದ್ಯಾರ್ಥಿ ಜೀವನ ಎಂದು ವ್ಯಾಖ್ಯಾನಿಸಿದರು.

ಹಳೆಯ ವಿದ್ಯಾರ್ಥಿ ಸಂದೀಪ್‌ಕುವಾರ್ ವಾತನಾಡಿ, ನಾವು ಕಲಿಯುವ ದಿನಗಳಲ್ಲಿ ಇಂಟರ್ನೆಟ್, ಮೊಬೈಲ್ ಏನೂ ಇರಲಿಲ್ಲ, ಸಿಇಟಿ ಬರೆದು ಪತ್ರಿಕೆಯಲ್ಲಿ ಫಲಿತಾಂಶಗಳನ್ನು ಪಡೆದುಕೊಂಡೆ, ನಂತರ ತುಮಕೂರಿಗೆ ಬಂದು ಬಿಇಯಲ್ಲಿ ತೇರ್ಗಡೆಯಾಗಿ ಉತ್ತಮ ಕಂಪನಿ ಮತ್ತು ಜೀವನಶೈಲಿ ರೂಪಿಸಿಕೊಂಡಿದ್ದೇನೆ ಎಂದರು.

ಸಿವಿಲ್ ಮತ್ತು ಮೆಕಾನಿಕಲ್, ವಾಹಿತಿ ತಂತ್ರಜ್ಞಾನ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪ್ರಶಸ್ತಿ ನೀಡಿ ಗೌರವಿಸಿಲಾಯಿತು. ಎಲೆಕ್ಟ್ರಿಕಲ್ ಮತ್ತುಎಲೆಕ್ಟ್ರಾನಿಕ್ಸ್ ವಿಭಾಗದ ಇಬ್ಬರು ವಿದ್ಯಾರ್ಥಿಗಳಿಗೆ ಚಿನ್ನದ ಫಲಕ ನೀಡಿ ಸತ್ಕರಿಸಲಾಯಿತು.

ಹಳೆಯ ವಿದ್ಯಾರ್ಥಿಗಳ ಸಂದ ಉಪಾಧ್ಯಕ್ಷ ಡಾ.ಬಿ.ಎಸ್.ರವಿಕಿರಣ್, ಜಂಟಿ ಕಾರ್ಯದರ್ಶಿ ಕೋಮಲಾ, ಕಾರ್ಯದರ್ಶಿ ಎಂ.ಪ್ರದೀಪ್, ಸಹಾಯಕ ಪ್ರಾಧ್ಯಾಪಕ ಶ್ರೀನಿಧಿ, ಶಾರದಾ ಗುಪ್ತಾ, ಹರಿಪ್ರಿಯ.ಆರ್, ಪುಷ್ಪಾ, ಚೇತನ, ಅಶ್ವಿನಿ ಇದ್ದರು.