ಚಿತ್ರದುರ್ಗ:ಹೊಳಲ್ಕೆರೆ ತಾಲೂಕು ರಂಗಾಪುರದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ನೇಣಿಗೆ ಶರಣು. ಭಾನುವಾರ ಸಂಜೆ ತನ್ನ ಮನೆ ಪಕ್ಕದಲ್ಲಿದ್ದ ಓದುವ ಕೊಠಡಿಯಲ್ಲಿ ಮಫ್ಲರ್‌ನಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ವಿದ್ಯಾರ್ಥಿ ಪ್ರಜ್ವಲ್(15)ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದ ಚಂದ್ರಶೇಖರ್ ಅವರ ಪುತ್ರ ಪ್ರಜ್ವಲ್,ಹೊಳಲ್ಕೆರೆ ವಾಗ್ದೇವಿ ಶಾಲೆಯಲ್ಲಿ ಓದುತ್ತಿದ್ದ.
ಶುಕ್ರವಾರ ಮತ್ತು ಶನಿವಾರ ತರಗತಿ ಪರೀಕ್ಷೆಗಳಿಗೆ ಗೈರು ಹಾಜರಾಗಿದ್ದ. ಈ ಹಿನ್ನೆಲೆಯಲ್ಲಿ ಸೋಮವಾರ ಪಾಲಕರನ್ನು ಶಾಲೆಗೆ ಕರೆದುಕೊಂಡು ಬರುವಂತೆ ಶಿಕ್ಷಕರು ವಿದ್ಯಾರ್ಥಿಗೆ ಸೂಚಿಸಿದ್ದರು. ನಿನ್ನೆ ಸಂಜೆ ಓದಿಕೊಳ್ಳುವುದಾಗಿ ಹೇಳಿ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಹೊಳಲ್ಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.