ಜಿಲ್ಲೆ

ಎಸ್ಸೆಸ್ಸೆಲ್ಸಿ ವಿಜ್ಞಾನ ಪ್ರಶ್ನೆಪತ್ರಿಕೆ ಸರಳೀಕರಣಕ್ಕೆ ಒತ್ತಾಯ

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ವಿಜ್ಞಾನ ಪ್ರಶ್ನೆಪತ್ರಿಕೆ ಸರಳೀಕರಣಕ್ಕೆ ಒತ್ತಾಯಿಸಿ ಜಿಲ್ಲಾ ಸಹಶಿಕ್ಷಕರ ಸಂಘ, ಜಿಲ್ಲಾ ವಿಜ್ಞಾನ ಶಿಕ್ಷಕರ ಜಿಲ್ಲಾ ಮತ್ತು ತಾಲೂಕು ಕ್ಲಬ್‌ಗಳ ಪದಾಧಿಕಾರಿಗಳು ಡಿಡಿಪಿಐ ಎಂ.ಆರ್.ಮಂಜುನಾಥ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಮಕ್ಕಳ ಬುದ್ಧಿಮತ್ತೆ ಆಧರಿಸಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಬೇಕು. ಗ್ರಾಮೀಣ ವಿದ್ಯಾರ್ಥಿಗಳಲ್ಲೂ ವಿಜ್ಞಾನ ವಿಷಯದೆಡೆ ಮೂಡಿಸುವಂತೆಯೂ ಇರಬೇಕೆಂದು ಆಗ್ರಹಿಸಿದರು. ಮನವಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಕಳಿಸಿಕೊಡುವುದಾಗಿ ಡಿಡಿಪಿಐ ಹೇಳಿದರು.
ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಸ್.ಶಿವಣ್ಣ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಜಿಲ್ಲಾ ವಿಜ್ಞಾನ ಕ್ಲಬ್ ಅಧ್ಯಕ್ಷ ಬಿ.ವಿ.ನಾಥ್, ಉಪಾಧ್ಯಕ್ಷ ರಾಮಶೇ ಖರ್, ಪ್ರಧಾನ ಕಾರ‌್ಯದರ್ಶಿ ಡಾ.ಮಹೇಶ್, ತಾಲೂಕು ವಿಜ್ಞಾನ ಕ್ಲಬ್ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಮಹಾಂತೇಶ್, ಪ್ರಧಾನ ಕಾರ‌್ಯದರ್ಶಿ ಹನುಮಂತಪ್ಪ ಶಿಕ್ಷಕರಾದ ಜಯಣ್ಣ,ಪ್ರಭುದೇವ್, ನಿಜಲಿಂಗಪ್ಪ, ಹಾಲೇಶ್, ಜ್ಯೋತಿ, ಆಜುಮ್ ಇತರರಿದ್ದರು.