ಜಿಲ್ಲೆ

ಎಸ್ಸೆಸ್ಸೆಲ್ಸಿ ಫೇಲಾಗುತ್ತೇನೆಂದು ಆತ್ಮಹತ್ಯೆ

ತುಮಕೂರು ಡೆಸ್ಕ್

ಮಧುಗಿರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮತ್ತೆ ಫೇಲಾಗುತ್ತೇನೆ ಎಂಬ ಭಯದಿಂದ ಹೆದರಿದ ಪಟ್ಟಣದ ವಿದ್ಯಾರ್ಥಿಯೊಬ್ಬ ಸೋಮವಾರ ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈತ ಸತೀಶ್​ ಕುಮಾರ್​ ಹಾಗೂ ಲಕ್ಷಿ$್ಮದೇವಿ ಅವರ ಹಿರಿಯ ಪುತ್ರ ಅಕ್ಷಯ್​ (15) ಮೃತ. ಇತ್ತೀಚೆಗೆ ಪ್ರಕಟಗೊಂಡಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 4 ವಿಷಯಗಳಲ್ಲಿ ಫೇಲಾಗಿದ್ದ, ನಂತರ ನಡೆದ 2ನೇ ಹಂತದ ಪರೀಕ್ಷೆ ಬರೆದಿದ್ದು, ಅದರಲ್ಲೂ ಫೇಲಾಗುತ್ತೇನೆ ಎಂಬ ಭಯದಿಂದ ಖಿನ್ನತೆಗೆ ಒಳಗಾಗಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣುಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಾಲೆಗೆ ಹೋಗಿದ್ದ ಅಕ್ಷಯ್​ ತಮ್ಮ ಶ್ರೇಯಸ್​ ಶಾಲೆಯಿಂದ ಮನೆಗೆ ಬಂದಾಗ ಅಣ್ಣ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮಧುಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಾಗಿದೆ.