ಕಲಬುರಗಿ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿ¯್ಲÉಗೆ ಜೇವರ್ಗಿ ತಾಲೂಕು ಪ್ರಥಮ ಸ್ಥಾನ ಪಡೆದಿದೆ. ಜೇವರ್ಗಿಯಲ್ಲಿ ೩,೩೭೧ ಬಾಲಕರು, ೩,೨೬೦ ಬಾಲಕಿಯರು ಸೇರಿ ೬,೬೩೧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ೧,೯೦೭ ಬಾಲಕರು, ೨,೪೧೮ ಬಾಲಕರು ಸೇರಿ ೪,೩೨೫ ಮಕ್ಕಳು ತೇರ್ಗಡೆಯಾಗಿz್ದÁರೆ.
ತಾಲೂಕಿನಲ್ಲಿ ಬಾಲಕರ ಶೇಕಡವಾರು ಫಲಿತಾಂಶ ಶೇ.೫೬.೫೭ ಹಾಗೂ ಬಾಲಕಿಯರದ್ದು ಶೇ.೭೪.೧೧ ರಷ್ಟಾಗಿದೆ. ಜೇವರ್ಗಿಯ ಒಟ್ಟಾರೆ ಫಲಿತಾಂಶ ಶೇ.೬೫.೨೨ ದಾಖಲಾಗಿದೆ. ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚು ಎಂಬುದು ದಾಖಲಾಗಿದೆ.
ಉತ್ತಮ ಫಲಿತಾಂಶಕ್ಕೆ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಸಂತಸ ವ್ಯಕ್ತಪಡಿಸಿದ್ದು, ರಾಜ್ಯ, ಜಿಲ್ಲೆಯ ಒಟ್ಟು ಫಲಿತಾಂಶ ಕುಸಿತವಾಗಿದ್ದು, ಜೇವರ್ಗಿ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಜೇವರ್ಗಿಯಲ್ಲಿ ೨೦೧೯ರಿಂದ ಧರ್ಮಸಿಂಗ್ ಫೌಂಡೇಷನ್ ಸಹಯೋಗದಲ್ಲಿ ನಡೆಯುತ್ತಿರುವ ಅP್ಷÀರ ಅವಿಷ್ಕಾರ ಮಿಶನ್- ೧೦೦ ಯೋಜನೆ ಇದೀಗ ಫಲ ನೀಡುತ್ತಿದೆ ಎಂದು ಹೇಳಿz್ದÁರೆ.
ಕೆಕೆಆರ್‌ಡಿಬಿಯು ಮುಂದಿನ ವರ್ಷವನ್ನು ಶಿಕ್ಷಣ ವರ್ಷವನ್ನಾಗಿ ಘೋಷಿಸಿದ್ದು, ಹೆಚ್ಚಿನ ಅನುದಾನ ಶಾಲಾ ಶಿಕ್ಷಣ ಮೂಲ ಸವಲತ್ತು, ಫಲಿತಾಂಶ ವೃದ್ಧಿಗೆ ಮೀಸಲಿಟ್ಟು ಕೆಲಸ ಮಾಡಲಿದೆ. ತಜ್ಞರೊಂದಿಗೆ ಚರ್ಚಿಸಿ, ಶಿP್ಷÀಣ ಇಲಾಖೆ ಅಧಿಕಾರಿಗಳ ಜತೆ ಕೂಡಿ ಶಿಕ್ಷಣ ವರ್ಷ ಯೋಜನೆ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
ಅP್ಷÀರ ಅವಿಷ್ಕಾರದ ಮಾದರಿಯಲ್ಲೇ ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳಲ್ಲಿ ಕೆಕೆಆರ್‌ಡಿಬಿ ಎಸ್ಸೆಸ್ಸೆಲ್ಸಿ ಫಲಿತಂಶ ಹೆಚ್ಚಳಕ್ಕೆ ಯೋಜನೆ ರೂಪಿಸಿ ಮುಂದಡಿ ಇಟ್ಟಿದೆ. ಕಲಿಕಾ ಆಸರೆ ಪುಸ್ತಕ ಮಕ್ಕಳಿಗೆ ನೀಡಲಾಗುತ್ತಿದೆ. ಈ ಯೋಜನೆಯಡಿ ಹೆಚ್ಚಿನ ಸುಧಾರಣೆ ಮಾಡಿ ಮಕ್ಕಳು ಕಲಿಕೆ ಯಾವ ಹಂತದಲ್ಲಿ ತೊಂದರೆ ಎದುರಿಸುತ್ತಿz್ದÁರೆಂಬುದು ಅರಿತು ಆ ಹಂತದ¯್ಲÉÃ ಆಸರೆಯಾಗುವ ದಿಸೆಯಲ್ಲಿ ಕೆಕೆಆರ್‌ಡಿಬಿ ಮುಂದುವರಿಯಲಿದೆ ಎಂದು ಡಾ.ಅಜಯಸಿಂಗ್ ತಿಳಿಸಿದ್ದಾರೆ.