ಬಸವಕಲ್ಯಾಣ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಸುಧಾರಣೆಗಾಗಿ ಕಾಳಜಿ ವಹಿಸಬೇಕು. ಅಭ್ಯಾಸದಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರನ್ನು ಪರೀಕ್ಷೆಗೆ ಸಜ್ಜು ಗೊಳಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿಲೀಕುಮಾರ ಉತ್ತಮ ಹೇಳಿದರು.
ನಗರದ ಜಿಜಾಮಾತಾ ಪ್ರೌಢಶಾಲೆಯಲ್ಲಿ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಬಸವಕಲ್ಯಾಣ ಹಾಗೂ ಹುಲಸೂರು ತಾಲೂಕು ಘಟಕ ಮತ್ತು ಎರಡು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಗುರುವಾರ ಆಯೋಜಿಸಿದ್ದ ಒಂದು ದಿನದ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯರುದ್ನೂರ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಶೇಕ್ ಮಹಬೂಬ್ ಪಟೇಲ್ ಮಾತನಾಡಿದರು.. ಸಂಪನ್ಮೂಲ ವ್ಯಕ್ತಿಗಳಾದ ಶಶಿಕಾಂತ ಜೋಶಿ, ಮೊಹಮ್ಮದ್ ಇಸ್ರಾರ್, ಸಂತೋಷ ಹೂಗಾರ ಕಾರ್ಯಾಗಾರ ನಡೆಸಿಕೊಟ್ಟರು.
ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ಮಾನೆ ಪ್ರಾಸ್ತಾವಿಕ ಮಾತನಾಡಿದರು ಶಿಕ್ಷಕರ ಸಂಘದ ಹುಲಸೂರ ಘಟಕದ ಅಧ್ಯಕ್ಷ ಸೂರ್ಯಕಾಂತ ಅಡಕೆ, ಪ್ರಮುಖರಾದ ಸುಧಾಕರ ಮುಳೆ, ಮಾಧವ್ ಗಣೇಶ, ಉದ್ಧವರಾವ ಉಪಾಸೆ, ಅನಿತಾ ಸೂರ್ಯವಂಶಿ, ಸುನಿತಾರೆಡ್ಡಿ, ವಿಜಯಕುಮಾರ ಪಟ್ನೆ, ಪ್ರೌಢಶಾಲೆ ಮುಖ್ಯಗುರು ಪ್ರತಾಪ ಸೂರ್ಯವಂಶಿ ಇತರರಿದ್ದರು. ಹುಲಸೂರ ಘಟಕದ ಕಾರ್ಯದರ್ಶಿ ಮದನಕುಮಾರ ಪಾಟೀಲ್ ಸ್ವಾಗತಿಸಿದರು. ಸಂತೋಷ ಸಾಗರ ವಂದಿಸಿದರು. ಬಸವರಾಜ ಮಾನೋಳೆ ನಿರೂಪಣೆ ಮಾಡಿದರು.