ಡಿಪಿಎನ್ ಶ್ರೇಷ್ಠಿ,ಚಿತ್ರದುರ್ಗ
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಪ್ರಯತ್ನಗಳ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾರ್ಚ್ 21ರಿಂದ ನಡೆಸುವ ಪರೀಕ್ಷೆ ಪ್ರಕ್ರಿಯೆ ಪಾರದರ್ಶಕತೆ ಖಚಿತತೆಗೆ ಎಐ ತಂತ್ರಜ್ಞಾನ ಬಳಕೆಗೆ ಇದೇ ಮೊದಲ ಬಾರಿಗೆ ಮುಂದಾಗಿದೆ.
ರಾಜ್ಯದ ಎಲ್ಲ ಪರೀಕ್ಷೆಗಳ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಲಿದೆ. ಫೂಟೇಜ್‌ಗಳ ವಿಶ್ಲೇಷಣೆಗೆ ಆರ್ಟಿ ಫಿಷಿಯಲ್ ಇಂಟಲ್‌ಜೆನ್ಸಿ ಟೆಕ್ನಾಲಜಿ ಬಳಕೆಯಾಗಲಿದೆ. ರಾಜ್ಯಮಟ್ಟದ ವಿಚಕ್ಷಣಾದಳ ಪರೀಕ್ಷಾ ದಿನಾಂಕಗಳಂದು ಎಐ ನೊಂದಿಗೆ ರಾಜ್ಯ ದಲ್ಲಿ ಕನಿಷ್ಠ 500 ಪರೀಕ್ಷಾ ಕೇಂದ್ರಗಳ ಮೇಲೆ ಆನ್‌ಲೈನ್ ಮೂಲಕ ಹದ್ದಿನ ಕಣ್ಣಿಡಲಿದೆ.
ಜಿಲ್ಲಾಮಟ್ಟದ ವಿಚಕ್ಷಣಾ ದಳದೊಂದಿಗೆ, ಈ ಬಾರಿ ತಾಲೂಕು ಮಟ್ಟದಲ್ಲೂ ವಿಚಕ್ಷಣಾದಳ ನಿಗಾ ವಹಿಸಲಿರುವುದು ಮತ್ತೊಂದು ವಿಶೇಷವಾಗಿದೆ. ಇಲಾಖೆ ಮೂಲಗಳ ಪ್ರಕಾರ ರಾಜ್ಯದೆಲ್ಲ ಶೈಕ್ಷಣಿಕ ಜಿಲ್ಲೆಗಳಲ್ಲಿ 2024 ಡಿಸೆಂಬರ್ ಅಂತ್ಯಕ್ಕೆ ಪಠ್ಯಬೋಧನೆ ಪೂರ್ಣ ಗೊಂಡಿದೆ.
ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ
ಮಾರ್ಚ್ 20ರವರೆಗೆ ಕಲಿಕೆಯಲ್ಲಿ ಹಿಂದುಳಿದವರು ಸೇರಿ ಎಲ್ಲ ವಿದ್ಯಾರ್ಥಿಗಳೂ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಬೇಕೆಂಬ ಆಶಯಕ್ಕೆ ಪೂರಕವಾಗಿ ಬೋರ್ಡ್,ಪ್ರತಿ ವಿಷಯಕ್ಕೆ ತಲಾ ಐದು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ. ಶಿಕ್ಷಕರು ಇವುಗಳನ್ನು ಉಳಿದಿರುವ ಅವಧಿ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಬೇಕಿದೆ.
ಕಲಿಕೆ,ಶಾಲಾ ಹಂತದ ಘಟಕ,ಕಿರು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಗಮನಿಸಿ ಎ,ಬಿ,ಸಿ ಮತ್ತು ಎನ್‌ಸಿ ಎಂದು ವರ್ಗೀಕರಿಸಲಾಗಿದೆ. ಎನ್‌ಸಿ(ನಾಟ್ ಕಂಪ್ಲಿಟೆಡ್)ವಿದ್ಯಾರ್ಥಿಗಳು ಪಾಸಾಗುವ ಹಂತಕ್ಕೆ ಕೊಂಡೊಯ್ಯುವುದು,ಇನ್ನುಳಿದ ವಿದ್ಯಾರ್ಥಿಗಳು ಉತ್ತಮ ಅಂಕಗಳಿಗೆ ಅಗತ್ಯ ಅಭ್ಯಾಸ ಮಾಡಿಸುವ ಟಾರ್ಗೆಟ್ ಶಿಕ್ಷಕರ ಮುಂದಿದೆ.
ಆಂತರಿಕ ಅಂಕಗಳ ಪರಿಶೀಲನೆ
ಪ್ರಥಮ ಭಾಷೆಯ ಒಟ್ಟು 125ಕ್ಕೆ 25,ವಿವಿಧ ವಿಷಯಗಳ ಒಟ್ಟು 100 ಅಂಕಗಳಿಗೆ,20 ಆಂತರಿಕ ಅಂಕಗಳಿರುತ್ತವೆ. ಈ ಆಂತರಿಕ ಅ ಂಕಗಳ ಮೌಲ್ಯಮಾಪನ ಮಾಡಿ ಫೆಬ್ರವರಿ ಅಂತ್ಯದೊಳಗೆ ಮಂಡಳಿಗೆ ಆಫ್‌ಲೋಡ್ ಮಾಡಬೇಕಾಗಿದೆ. ಇದರ ನಿಗಾಕ್ಕಾಗಿ ಮುಖ್ಯಶಿಕ್ಷಕರ ನೇತೃತ್ವದಲ್ಲಿ ವಿಜ್ಞಾನ ಹಾಗೂ ಕಲಾ/ಭಾಷ ಶಿಕ್ಷಕರಿರುವ ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ.
ಆಯಾ ತಾಲೂಕಿನಲ್ಲಿ ಶಾಲೆಗಳ ಸಂಖ್ಯೆಗೆ ಅನುಗುಣವಾಗಿ ಸಮಿತಿಗಳನ್ನು ರಚಿಸಲಾಗುತ್ತದೆ. ಎಫ್‌ಎ-1(್ಛಟ್ಟಞಠಿಜಿಛಿ ಛಿ ಞಛ್ಞಿಠಿ)4ರವರೆಗಿನ ದಾಖಲೆಗಳನ್ನು ಸಮಿತಿ ಪರಿಶೀಲಿಸಿ,ಮನಸೋ ಇಚ್ಛೆ ಆಂತರಿಕ ಅಂಕಗಳನ್ನು ಕೊಟ್ಟಿಲ್ಲವೆಂಬುದನ್ನು ದೃಢೀಕರಿಸಲಿ ದೆ. ವಿದ್ಯಾರ್ಥಿಗಳು ಸಿಸಿ ಕ್ಯಾಮರಾಗಳಡಿ ಪರೀಕ್ಷೆ ಬರೆಯಲು ಆತಂಕ ಪಡುವುದು ಬೇಡ ಎಂಬ ಕಾರಣಕ್ಕೆ ಯಾವೆಲ್ಲ ಶಾಲೆಗಳಲ್ಲಿ ಕ್ಯಾಮ ರಾಗಳಿವೆಯೋ ಅಲ್ಲಿಯೇ ಕಿರು ಪರೀಕ್ಷೆಗಳನ್ನು ನಡೆಸಲಾಗಿದೆ.
ಕೋಟ್
ಫಲಿತಾಂಶ ಸುಧಾರಣೆಗೆ ಇಲಾಖೆ 22ಅಂಶಗಳೊಂದಿಗೆ ಅಭ್ಯಾಸ ಮಾಡಿಸುವಂತೆ ಶಿಕ್ಷಕರಿಗೆ ಸೂಚಿಸಿತ್ತು. ಶಿಕ್ಷಕರಿಗೆ ತರಬೇತಿಯನ್ನೂ ಕೊಡಲಾಗಿದೆ. ವಿದ್ಯಾರ್ಥಿಗಳಿಗೆ ಬೆಳಗ್ಗೆ ಫೋನ್ ಮಾಡುವುದು,ವಿಶೇಷ ತರಗತಿ,ಬಡ್ಡಿಫೇರಿಂಗ್(ಉತ್ತಮ ಕಲಿಕೆ ಹಾಗೂ ಕಲಿಕೆಯಲ್ಲಿ ಹಿಂ ದುಳಿದ ವಿದ್ಯಾರ್ಥಿಗಳ ಗುಂಪು)ಇತ್ಯಾದಿ ಅಂಶಗಳೊಂದಿಗೆ ಅಭ್ಯಾಸ ಮಾಡಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ 24743 ವಿ ದ್ಯಾರ್ಥಿಗಳು,87 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ಎಸ್.ನಾಗಭೂಷಣ್,ಬಿಇಒ,ಚಿತ್ರದುರ್ಗ.
---