ಜಿಲ್ಲೆ

ಎಸ್ಸೆಸ್ಸೆಲ್ಸಿ ಅರ್ಧ ವಾರ್ಷಿಕ ಪರೀಕ್ಷೆ ಸಮಯ ಬದಲಾವಣೆ

ಚಿತ್ರದುರ್ಗ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಎಸ್ಸೆಸ್ಸೆಲ್ಸಿ ಅರ್ಧ ವಾರ್ಷಿಕ ಪರೀಕ್ಷೆ ಸೆ.12ರಿಂದ 19ರವರೆಗೆ ನಡೆಯಲಿದೆ.

ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷಾ ಸಮಯ ನಿಗದಿ ಆಗಿದೆ. ಆದರೆ, ಚಿತ್ರದುರ್ಗ ನಗರದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಶೋಭಾಯಾತ್ರೆ ನಡೆಯುವ ಸೆ. 13ರಂದು ನಗರ ವ್ಯಾಪ್ತಿಯ ಪ್ರೌಢಶಾಲೆಗಳಿಗೆ ಸೀಮಿತವಾಗಿ ಸಮಯವನ್ನು ಬೆಳಗ್ಗೆ 10.30-ಮಧ್ಯಾಹ್ನ 1.45 ರ ಬದಲು ಬೆಳಗ್ಗೆ 8.30 ರಿಂದ 11 ಗಂಟೆಗೆ ನಡೆಸಲಾಗುತ್ತದೆ.

ಡಿಡಿಪಿಎಂ ಎಂ.ಆರ್.ಮಂಜುನಾಥ್ ಹಾಗೂ ಜಿಲ್ಲೆಯ ಬಿಇಒಗಳೊಂದಿಗೆ ಮಂಗಳವಾರ ಸಭೆ ನಡೆಸಿದ ಜಿಪಂ ಸಿಇಒ ಡಾ.ಎಸ್.ಆಕಾಶ್ ಮಾಹಿತಿ ನೀಡಿದ್ದಾರೆ. ಚಿತ್ರದುರ್ಗ ಗಣಪತಿ ಶೋಭಾಯಾತ್ರೆ ಆರಂಭವಾಗುವುದರೊಳಗೆ ಅಂದಿನ ವಿಷಯದ ಪರೀಕ್ಷೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಸೆ.13 ರಂದು ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ ಎಂದು ಬಿಇಒ ಎಸ್. ನಾಗಭೂಷಣ್ ತಿಳಿಸಿದ್ದಾರೆ.