ಚಿತ್ರದುರ್ಗ: ರಾಷ್ಟ್ರನಾಯಕ, ಕರ್ನಾಟಕ ಏಕೀಕರಣದ ನೇತಾರ, ಮಾಜಿ ಸಿಎಂ ಎಸ್.ನಿಜಲಿಂಗಪ್ಪ ನಾಡು ಕಂಡ ಅಪರೂಪದ ರಾಜಕಾರಣಿ. ಅವರು ಜೀವಿಸಿದ ನಿವಾಸ ಸ್ಮಾರಕವಾಗುತ್ತಿರುವುದು ಸಜ್ಜನ ರಾಜಕಾರಣಿಗೆ ಸಲ್ಲುತ್ತಿರುವ ಗೌರವ ಎಂದು ರಾಜ್ಯ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್.ಟಿ.ಬಳೆಗಾರ್ ತಿಳಿಸಿದ್ದಾರೆ.
ಎಸ್ಸೆನ್ ನಿವಾಸ ಕರ್ನಾಟಕ ರತ್ನ ಭವನವನ್ನಾಗಿಸಬೇಕು ಎಂದು ಭಾನುವಾರ ಪತ್ರಿಕಾ ಹೇಳಿಕೆ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಾಡಿಗೆ ನಿಜಲಿಂಗಪ್ಪ ಅವರ ಕೊಡುಗೆ ಅಪಾರ. ಹೀಗಾಗಿ ನಿವಾಸವನ್ನು ಸದಾ ಸ್ಮರಿಸುವ ಸ್ಮಾರಕವನ್ನಾಗಿಸುವ ಪ್ರಥಮ ಪ್ರಯತ್ನ ಮಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೂಲಕ ಸರ್ಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.