ಜಿಲ್ಲೆ

ಎಸ್ಸೆನ್ ತತ್ವಾದರ್ಶ ಯುವ ಪೀಳಿಗೆಗೆ ಮಾದರಿ

ಚಿತ್ರದುರ್ಗ: ರಾಷ್ಟ್ರ ನಾಯಕ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ತತ್ವಾರ್ಶಗಳನ್ನು ಯುವ ಪೀಳಿಗೆಗೆ ತಿಳಿಸಬೇಕಿದೆ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಸೀಬಾರದ ಎಸ್.ನಿಜಲಿಂಗ ಪ್ಪ ಸ್ಮಾರಕದಲ್ಲಿ ಗುರುವಾರ ಏರ್ಪಡಿಸಿದ್ದ ನಿಜಲಿಂಗಪ್ಪ ಅವರ 25ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಅವರ ಭಾಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರೀಗಳು ಮಾತನಾಡಿದರು.
ಅಕ್ಕಪಕ್ಕದ ದೇಶಗಳಲ್ಲಿ ನಡೆಯುತ್ತಿರುವ ಅನಾಹುತಗಳನ್ನು ನೋಡುತ್ತಿದ್ದೇವೆ. ಬಾಂಗ್ಲಾ ದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರದಿಂದ ಅರಾಜಗಕತೆಯುಂಟಾಗಿದೆ. ಇದಕ್ಕೆ ಮಾರ್ಗದರ್ಶನದ ಕೊರತೆ ಕಾರಣ. ದೇಶದಲ್ಲಿ ಅಧ್ಯಾತ್ಮ, ಸಂಸ್ಕಾರದ ಶಿಕ್ಷಣವಿದೆ. ನಿಷ್ಕಳಂಕ ರಾಜಕಾರಣಿಯಾಗಿದ್ದ ಎಸ್‌ಎನ್ ಅವರು ಭವಿಷ್ಯ ಭಾರತದ ದೃಷ್ಟಿಯಿಂದ ಅವರಲ್ಲಿದ್ದ ಚಿಂತನೆಗಳನ್ನು ಎಲ್ಲರಿಗೂ ತಿಳಿಸಬೇಕಿದೆ ಎಂದರು.
ಶಾಸಕರು, ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಶಿಬಿರಕ್ಕೆ ಶೀಘ್ರ ಚಾಲನೆ ಕೊಡಬೇಕಾಗಿದೆ. ಇದಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತದ ಸಹಕಾರ ಅಗತ್ಯವಿದೆ. ಎಸ್‌ಎನ್ ಸ್ಮಾರಕದ ಕಂಬಗಳು ಶಿಥಿಲಗೊಂಡಿವೆ. ಅನಾಹುತ ಸಂಭವಿಸುವ ಮುನ್ನ ದುರಸ್ತಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಎಸ್.ಎನ್.ಸ್ಮಾರಕ ಟ್ರಸ್ಟ್ ಗೌರವ ಕಾರ್ಯದರ್ಶಿ ಎಚ್.ಹನುಮಂತಪ್ಪ, ಟ್ರಸ್ಟಿಗಳಾದ ಕೆಇಬಿ ಷಣ್ಮುಖಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ರೋಟರಿ ಕ್ಲಬ್ ಅಧ್ಯಕ್ಷ ಜಿ.ಎನ್.ವೀರಣ್ಣ, ವೀರಭದ್ರಸ್ವಾಮಿ, ಎಸ್.ವೀರೇಶ್, ಜಿ.ಎಂ.ಪ್ರಕಾಶ್, ನಾಗರಾಜ್ ಸಂಗಮ್, ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಕೆ.ಶಂಕರಪ್ಪ, ತಮಟಕಲ್ಲು ಕರಿಬಸಪ್ಪ, ಧನಂಜಯ ಲಕ್ಷ್ಮೀಸಾಗರ, ತಾಪಂ ಮಾಜಿ ಅಧ್ಯಕ್ಷ ಜಯಣ್ಣ ಹಾಗೂ ವಿಶ್ವಮಾನವ ಶಾಲೆ ವಿದ್ಯಾರ್ಥಿಗಳಿದ್ದರು.