ಬಾಗಲಕೋಟೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಿಸಲಿಟ್ಟ ಲಕ್ಷಾಂತರ ಕೋಟಿ ಎಸ್ಸಿ, ಟಿಎಸ್‌ಪಿ ಹಣ ತಲುಪಿಸದೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಅಧಿಕಾರ ಅವಧಿಯಲ್ಲಿ ಎಸ್ಸಿ,ಎಸ್ಟಿ ಸಮಾಜಕ್ಕೆ ಮಹಾ ದ್ರೋಹ ಎಸಗಿವೆ ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಸಿ.ಕಾಂಬಳೆ ಆರೋಪಿಸಿದರು.
ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಬಿಎಸ್‌ಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ತುಳಿತಕ್ಕೆ ಒಳಗಾದ ಜನಾಗಂಗಕ್ಕೆ ಬರಬೇಕಾದ ಅನುದಾನ ಭ್ರಷ್ಟಾಚಾರ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಅವರ ಏಳಿಗೆ ಬಯಸುವ ಬದಲು ದ್ರೋಹ ಮಾಡಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖ್ಯಗಳು ಎಂದು ದೂರಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಬಿ.ಸಿದಗೋಣಿ, ಗುರುಶಾಂತಪ್ಪ ಮದೀನಕರ, ಯಲ್ಲಪ್ಪ ಸನಕ್ಯಾನವರ, ಭೀಮಪ್ಪ ಪೂಜಾರಿ, ಬಂದೇನವಾಜ ಯಡಹಳ್ಳಿ, ಪುಂಡಲೀಕ ಬಾಳಪ್ಪಗೋಳ, ವಿಠ್ಠಲ ಜಾನಮಟ್ಟಿ, ಶಂಕರ ಚಂದಾವರಿ, ಶೇಖಪ್ಪ ಬೆನ್ನೂರ, ಸುನೀಲ ಜಲಗೇರಿ, ನಾಗೇಶ ಚಂದಾವರಿ ಇದ್ದರು.