ಜಿಲ್ಲೆ

ಎಸ್ಸಿ,ಎಸ್ಟಿ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ

*ಅಧ್ಯಕ್ಷರಾಗಿ ಸಿ.ಕೆ.ಮಂಜುನಾಥ್ ಆಯ್ಕೆ

ಚಾಮರಾಜನಗರ: ಚಾ.ನಗರ ಪರಿಶಿಷ್ಟ ಜಾತಿ ಮತ್ತು ಪಂಗಡ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಸಂಘವನ್ನು ಅಸ್ತಿತ್ವಕ್ಕೆ ತಂದು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸಿ.ಕೆ.ಮಂಜುನಾಥ್ ಹೇಳಿದರು.

ನಗರದ ಪ್ರವಾಸಿಮಂದಿರದಲ್ಲಿ ನಡೆದ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್ ಸಿ , ಎಸ್ ಟಿ ಗುತ್ತಿಗೆದಾರರ ಸಂಘಟಿತರಾದ ಮಾತ್ರ ಸರ್ಕಾರ ಕಾಮಗಾರಿಗಳನ್ನು  ಪಡೆಯಲು ಸಾಧ್ಯ. ತುಂಡುಗುತ್ತಿಗೆಯಲ್ಲೂ ಕಾಮಗಾರಿಗಳನ್ನು ಪಡೆಯಬಹುದು. ಒಂದು ಕೋಟಿ ಗುತ್ತಿಗೆ ಮೀಸಲಾತಿ ಜಾರಿಯಲ್ಲಿದೆ. ಕಾಮಗಾರಿಗಳನ್ನು ಕ್ರೋಡೀಕರಿಸಿ ಪ್ಯಾಕೇಜ್ ಮಾಡುವುದರ ವಿರುದ್ದ ಹೋರಾಟ ಮಾಡಲಾಗುತ್ತದೆ ಎಂದರು.

ಪದಾಧಿಕಾರಿಗಳ ಆಯ್ಕೆ:

ಚಾ.ನಗರ ಎಸ್ಸಿ,ಎಸ್ಟಿ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ  ಸಿ.ಕೆ.ಮಂಜುನಾಥ್, ಉಪಾಧ್ಯಕ್ಷರಾಗಿ ರಂಗನಾಯಕ,  ಚಾ.ಗು.ನಾಗರಾಜ್, ಬಿ.ಎಲ್.ಮಹದೇವಸ್ವಾಮಿ ( ಚಿತ್ತು),  ಕಾರ್ಯದರ್ಶಿ ಯಾಗಿ ಪರ್ವತ್ ರಾಜ್, ಸಹ ಕಾರ್ಯದರ್ಶಿಗಳಾಗಿ  ಬಿ.ಎಂ.ಮಹದೇವಸ್ವಾಮಿ, ಎಂ.ಬಸವಣ್ಣ, ಖಜಾಂಚಿಯಾಗಿ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿಯಾಗಿ ಸೋಮುಸುಂದರ್, ನಿರ್ದೇಶಕ ರಾಗಿ ಸುಹ್ವಾಸ್, ಶಾಂತರಾಜ್, ರವಿಕುಮಾರ್, ಲೋಕಸಾಗರ್, ಮೋಹನ್ ಕುಮಾರ್‌, ಮಹದೇವಸ್ವಾಮಿ ಡಿ, ಹೇಮಂತ್ ಎಸ್, ಆರ್.ರವಿ, ಬಸವರಾಜು ಎಸ್ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದರು.