ಕಾಗವಾಡ, ಬೆಳಗಾವಿ: ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಸ್ಸಿ ಜನಾಂಗದ ರೈತರ ಜಮೀನುಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಪಟ್ಟಣದ ಎಸ್‌ಸ್ಸಿ ರೈತರ ಜಮೀನಿನಲ್ಲಿ ಶನಿವಾರ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಅನೇಕ ವರ್ಷಗಳಿಂದ ಎಸ್‌ಸ್ಸಿ ಸಮುದಾಯದ 60 ಎಕರೆ ರೈತರ ಜಮೀನುಗಳಿಗೆ ನೀರಿನ ಕೊರತೆ ಇತ್ತು. ನನ್ನ ಗಮನಕ್ಕೆ ಬಂದ ನಂತರ 2020ರಲ್ಲಿ 40 ಲಕ್ಷ ರೂ. ಮಂಜೂರಾತಿ ಮಾಡಿ, ಕಾಮಗಾರಿ ಕೈಗೊಳ್ಳಲಾಗಿತ್ತು. ಅನುದಾನದ ಕೊರತೆಯಿಂದಾಗಿ ಕಾಮಗಾರಿ ಪೂರ್ಣ ಆಗದೆ ಅರ್ಧಕ್ಕೆ ನಿಂತಿತ್ತು.
ಇದೀಗ ಹೆಚ್ಚುವರಿ 40 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ್ದು, ಮತ್ತೊಮ್ಮೆ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಶೀಘ್ರ ಕೃಷ್ಣಾ ನದಿಯಿಂದ ಏತ ನೀರಾವರಿ ಮೂಲಕ ನೀರು ಹರಿಸಲಾಗುವುದು ಎಂದರು. ವಿಠ್ಠಲ ಪವಾರ, ರವಿ ಪಾಟೀಲ, ಬಾಳು ಚವ್ಹಾಣ, ದೀಪಕ ಕಾಂಬಳೆ, ಅಮರ ಶಿಂಧೆ, ವಿಜಯ ಚವ್ಹಾಣ, ಬಾಳಾಸಾಬ ಕಾಂಬಳೆ, ವಿಜಯ ಸಂಭಾಳೆ, ಶೀಲಾಧರ ಚವ್ಹಾಣ, ಜಿತೇಂದ್ರ ಕಾಂಬಳೆ, ಯಲ್ಲಪ್ಪ ಕಾಂಬಳೆ, ಆಕಾಶ ಮೇತ್ರೆ, ಬಬಲು ಕಾಂಬಳೆ, ಅಶೋಕ ಕಾಂಬಳೆ, ಜಯಪಾಲ ಬಡಿಗೇರ, ಗುತ್ತಿಗೆದಾರ ನಾನಾಸಾಬ್ ಅವತಾಡೆ ಇತರರಿದ್ದರು.