ಜಿಲ್ಲೆ

ಎಸ್ಸಿ, ಎಸ್ಟಿ ನೌಕರರ ಸಂಘ ಅಸ್ತಿತ್ವಕ್ಕೆ

ಹುಲಸೂರು: ತಹಸಿಲ್ ಕಚೇರಿ ಆವರಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ರಚಿಸಲಾಯಿತು.

ಶುಕ್ರವಾರ ಕರೆದಿದ್ದ ಸಭೆಯಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಶಿವಾನಂದ ಮೇತ್ರೆ, ಜಿಲ್ಲಾಧ್ಯಕ್ಷ ಅಮೃತ ಮೊಳಕೆರೆ ನೇತೃತ್ವ ವಹಿಸಿ ಪದಾಧಿಕಾರಿಗಳ ಆಯ್ಕೆ ಮಾಡಿದರು.

ನೂತನ ಪದಾಧಿಕಾರಿಗಳು: ತಾಪಂ ಇಒ ಮಹಾದೇವ ಜಮ್ಮು (ಗೌರವಾಧ್ಯಕ್ಷ), ಧರ್ಮೇಂದ್ರ ಭೋಸ್ಲೆ (ಅಧ್ಯಕ್ಷ), ಮಾಧವ ಸೂರ್ಯವಂಶಿ (ಪ್ರಧಾನ ಕಾರ್ಯದರ್ಶಿ), ಶ್ರೀಧರ ಬಲ್ಲೂರ (ಕೋಶಾಧ್ಯಕ್ಷ), ದಿಗಂಬರ ಕಿವಡೆ (ಸಲಹೆಗಾರ), ಶಂಕರ ಪವಾರ (ಸಹ ಕೋಶಾಧ್ಯಕ್ಷ), ಮಾರುತಿ ಬೇಂದ್ರೆ, ಮೋನಿಕಾ ಝಾಕಡೆ, ಪರಶುರಾಮ ರಾಠೋಡ, ಮಲ್ಲಾರಿ ಪಾಂಡರೆ (ಉಪಾಧ್ಯಕ್ಷ), ಆನಂದ ಜಾಧವ್, ಅರುಣಕುಮಾರ ಭಾಲ್ಕೆ, ರಾಜಕುಮಾರ (ಸಹ ಕಾರ್ಯದರ್ಶಿ), ಮಹೇಂದ್ರ ಶೃಂಗಾರೆ (ಸಾಮಾಜಿಕ ಜಾಲತಾಣದ ಮುಖ್ಯಸ್ಥ), ವಚಲಾಬಾಯಿ (ಸಂಘಟನಾ ಕಾರ್ಯದರ್ಶಿ), ಪ್ರೇಮಲಾಬಾಯಿ ಪುಜೆ, ಬಬ್ರುವಾನ (ಜಂಟಿ ಕಾರ್ಯದರ್ಶಿ), ಬಾಲಾಜಿ ವಾಗಲೆ (ಪತ್ರಿಕಾ ಕಾರ್ಯದರ್ಶಿ), ಶ್ರೀಮಂತ ಶಿಂಧೆ (ಸಾಂಸ್ಕೃತಿಕ ಕಾರ್ಯದರ್ಶಿ) ಅವರನ್ನು ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಗೌರವಾಧ್ಯಕ್ಷರಾದ ತಹಸೀಲ್ದಾರ್ ಶಿವಾನಂದ ಮೇತ್ರೆ ತಿಳಿಸಿದ್ದಾರೆ.