ಕಲಬುರಗಿ: ಶರಣಬಸವೇಶ್ವರ ಸಂಯುಕ್ತ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಬೋಳೇಶಂಕರ ಹಾಗೂ ಕೃಷ್ಣೆಗೌಡನ ಆನೆ ನಾಟಕ ಪ್ರದರ್ಶಿಸಲಾಯಿತು. ಪಿಯುಸಿ ಪ್ರಥಮ ವರ್ಷದ ಹಾಗೂ ದ್ವಿತೀಯ ವರ್ಷದ ಕನ್ನಡ ಪಠ್ಯದಲ್ಲಿರುವ ಡಾ.ಚಂದ್ರಶೇಖರ ಕಂಬಾರ ವಿರಚಿತ ಬೋಳೇಶಂಕರ ಹಾಗೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ರಚಿತ ಕೃಷ್ಣೆಗೌಡನ ಆನೆ ನಾಟಕ ಪ್ರದರ್ಶಿಸಲಾಯಿತು. ಶ್ರೀರಂಗ ಕಲಾ ತಂಡದ ಹವ್ಯಾಸಿ ಕಲಾವಿದರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ನಟಿಸಿದರು. ಪಠ್ಯದಲ್ಲಿರುವ ಪಾಠಗಳೇ ನಾಟಕ ಆಗಿರುವುದರಿಂದ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಸಹಕಾರಿಯಾಗಿದೆ. ಪ್ರಾಚಾರ್ಯ ಎನ್.ಎಸ್.ದೇವರಕಲ ಮಾರ್ಗದರ್ಶನದಲ್ಲಿ, ಮೇಲ್ವಿಚಾರಕ ಡಾ.ಶ್ರೀಶೈಲ ಹೊಗಾಡೆ ಸಿಬ್ಬಂದಿ ಇದ್ದರು.