ಬಳ್ಳಾರಿ : ಜಿಲ್ಲೆಗೆ ನೂತನ ಎಸ್ಪಿಯಾಗಿ ಡಾ. ವಿ.ಜೆ. ಶೋಭಾರಾಣಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಲಾಗಿದೆ. ಶೋಭಾರಾಣಿ ಅವರು ಜಿಲ್ಲೆಯ ಪ್ರಥಮ ಮಹಿಳಾ ಎಸ್ಪಿಯಾದ ಹೆಗ್ಗಳಿಕೆ ಪಡೆದರು. ಸದ್ಯ ಬೆಂಗಳೂರಿನ ಬೃಹತ್ ಮಹಾನಗರ ಪಾಲಿಕೆಯ ಕಾರ್ಯತಂಡದ ಹೆಚ್ಚುವರಿ ಡಿಜಿಪಿಯಾಗಿದ್ದರು. 2008 ರಲ್ಲಿ ಬೆಂಗಳೂರಿನಲ್ಲಿ ಸಂಚಾರಿ ವಿಭಾಗದ ಡಿಸಿಪಿಯಾಗಿ ಕರ್ತವ್ಯಕ್ಕೆ ಸೇರಿದರು. ಬಳಿಕ ತುಮಕೂರಿನಲ್ಲಿ ಆಡಿಷನಲ್ ಎಸ್ಪಿಯಾಗಿ, ನಂತರ ಹಾಸನದಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲೆಗೆ ಈ ಹಿಂದೆ ಇದ್ದ ಎಸ್ಪಿ ರಂಜಿತ ಕುಮಾರ ಬಂಡಾರು ಅವರನ್ನು ಸ್ಥಳ ನಿಗದಿ ಮಾಡದೆ ವರ್ಗಾವಣೆ ಮಾಡಲಾಗಿದೆ.