ಜಿಲ್ಲೆ

ಎಸ್ಡಿಪಿಐ ಪಿಎಫ್ಐ ನಿಷೇಧಿಸಿ

ಕಲಬುರಗಿ: ಶಾಂತಿಯ ನಾಡಿನಲ್ಲಿ ಕೋಮು ಗಲಭೆ ಸೃಷ್ಟಿಸಲು ಕಾರಣವಾಗಿರುವ ಎಸ್ಡಿಪಿಐ ಹಾಗೂ ಪಿಎ್ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಹಿಂದು ರಕ್ಷಕ ಶಿವಾಜಿ ಬ್ರಿಗೇಡ್ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಡಿಸಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರಿನ ಕೆ.ಜೆ. ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ಮಂತಾಧರು ಸೇರಿ ಅಮಾಯಕ ಹಿಂದುಗಳು ಮತ್ತು ಪೊಲೀಸರು, ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಕೆಲ ಮನೆ, ಪೊಲೀಸ್ ಠಾಣೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದು, ದುಷ್ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗಲಭೆಗೆ ಎಸ್ಡಿಪಿಐ ಸಂಘಟನೆ ಅಧ್ಯಕ್ಷನ ಪ್ರಚೋದನಾಕಾರಿ ಭಾಷಣವೇ ಕಾರಣವಾಗಿದೆ. ಅಮಾಯಕ ಹಿಂದುಗಳ ಮೇಲೆ ಹಲ್ಲೆ ಮಾಡಿದ್ದು, ಮನೆ ಸುಟ್ಟಿದ್ದನ್ನು ಖಂಡಿಸಿ ಪ್ರತಿಭಟಕಾರರು ಘೋಷಣೆಗಳನ್ನು ಕೂಗಿದರು.
ಎಸ್ಡಿಪಿಐ-ಪಿಎ್ಐ ಸಂಘಟನೆಗಳು ಆರಂಭದಿಂದಲೂ ಸಂಚು ರೂಪಿಸಿ ಗಲಭೆ ನಡೆಸಿಕೊಂಡು ಬರುತ್ತಿವೆ. ಇಂತಹ ಸಂಘಟನೆಗಳಿಂದ ಸಮಾಜದ ಸ್ವಾಸ್ಥೃ ಹಾಳಾಗುತ್ತಿದ್ದರಿಂದ ಕೂಡಲೇ ಸಕರ್ಾರ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಶಿವಾಜಿ ಬ್ರಿಗೇಡ್ ಅಧ್ಯಕ್ಷ ಗುರುತಾಂಶ ಟೆಂಗಳಿ, ಪ್ರಮುಖರಾದ ಶ್ರೀಶೈಲ ಮೂಲಗೆ, ಧನರಾಜ, ಸುರೇಶ ತಳವಾರ, ಸಂತೋಷ ಬೆನಕಹಳ್ಳಿ, ಶಿವರಾಜ ಬಾಳಿ, ಪ್ರಶಾಂತ ಬಡಿಗೇರ, ಶಿವು ಬಿರಾದಾರ, ಗಂಗಾಧರ ವಿಶ್ವಕರ್ಮ, ಸುನೀಲ, ರಾಘವೇಂದ್ರ ಇತರರು ಪಾಲ್ಗೊಂಡಿದ್ದರು.