ಚಾಮರಾಜನಗರ: ಕುರುಬ ಜನಾಂಗವನ್ನು ಎಸ್ಟಿ ಮೀಸಲು ವ್ಯಾಪ್ತಿಗೆ ಸೇರಿಸುವುದನ್ನು ಖಂಡಿಸಿ ಸೆ.29 ರಂದು ನಾಯಕ ಸಮುದಾಯದಿಂದ ಜಿಲ್ಲಾಡಳಿತ ಭವನದ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಮುಖಂಡ ಅಗರರಾಜು ತಿಳಿಸಿದರು.
ಕುರುಬ ಸಮುದಾಯದವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ಸಿ.ಎಂ ಸಿದ್ದರಾಮಯ್ಯ ಮೌನವಾಗಿ ಹುನ್ನಾರ ನಡೆಯುತ್ತಿದ್ದಾರೆ. 50 ವರ್ಷಗಳ ಹಿಂದೆ ಎಲ್ಜಿ ಹಾವನೂರು ಆಯೋಗವು ಕುರುಬ ಸಮುದಾಯದವನ್ನು ಎಸ್ಟಿ ಸಮುದಾಯದಿಂದ ತೆಗೆದು ಹಿಂದುಳಿದ ವರ್ಗಕ್ಕೆ ಸೇರಿಸಿದೆ. ಇದೀಗ ಮತ್ತೆ ಎಸ್ಟಿ ಸಮುದಾಯಕ್ಕೆ ಸೇರಿಸುವ ಹುನ್ನಾರ ಎಷ್ಟರ ಮಟ್ಟಿಗೆ ಸರಿಯಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯ ಉದ್ದೇಶವನ್ನು ಇಟ್ಟುಕೊಂಡು ಈ ಹುನ್ನಾರವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಓಟ್‌ಬ್ಯಾಂಕ್ ಮಾಡಿಕೊಂಡು ಸಮುದಾಯಗಳ ನಡುವೆ ಎತ್ತಿಕಟ್ಟಿ, ವೈಮನಸ್ಸು ಉಂಟುಮಾಡಿ ರಾಜಕಾರಣ ಮಾಡುವುದೇ ಸಿಎಂ ಅವರ ಹೆಗ್ಗಳಿಗೆಯಾಗಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ಸದಾಶಿವಮೂರ್ತಿ, ದೇವರಾಜು, ನಂಜುಂಡನಾಯಕ, ವೆಂಕಟಾಚಲ ಹಾಜರಿದ್ದರು.