ಜಿಲ್ಲೆ

ಎಸ್ಟಿ ಪ್ರಮಾಣ ಪತ್ರ ನೀಡಿ

Kalaburagi

ಚಿತ್ತಾಪುರ: ತಳವಾರ ಸಮುದಾಯಕ್ಕೆ ಕೂಡಲೇ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದ ತಹಸಿಲ್ ಕಚೇರಿ ಎದುರು ಕೋಲಿ ಸಮಾಜದ ತಾಲೂಕು ಘಟಕದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಸಮಾಜದ ತಾಲೂಕು ಅಧ್ಯಕ್ಷ ಹಣಮಂತ ಸಂಕನೂರ ಮಾತನಾಡಿ, ಕೇಂದ್ರ ಸರ್ಕಾರವು ತಳವಾರ ಜಾತಿ ಹಾಗೂ ಪರಿವಾರ ಜಾತಿಗಳನ್ನು ಸಂವಿಧಾನ ಬದ್ಧವಾಗಿ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದೆ. ಅದರ ಪ್ರಕಾರ ತಳವಾರ ಸಮಾಜದವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಕೊಡಬೇಕು. ಆದರೆ ರಾಜ್ಯದಲ್ಲಿ ಕೆಲ ಅಧಿಕಾರಿಗಳು ಪ್ರಮಾಣ ಪತ್ರ ನೀಡುವಲ್ಲಿ ವಿನಾಕಾರಣ ಗೊಂದಲ ಮೂಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಎಸ್ಟಿ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಧ್ಯ ಪ್ರವೇಶಿಸಿ ಗೊಂದಲ ನಿವಾರಿಸಿ ತಳವಾರ ಜನಾಂಗದವರಿಗೆ ನ್ಯಾಯ ಒದಗಿಸಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿರುವ ಹಾಗೂ ರಾಜಕೀಯ ಏಜೆಂಟರಂತೆ ವರ್ತಿಸುತ್ತಿರುವ ಅಧಿಕಾರಿಗಳ ವಿರುದ್ದ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಬೇಕು. ಎಸ್ಟಿ ಪ್ರಮಾಣ ಪತ್ರ ವಿತರಣೆ ಮಾಡುವಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ಸಮುದಾಯದವರಿಗೆ ಅನ್ಯಾಯ ಮಾಡಿತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಕಲಬುರಗಿಯ ಮಾಣಿಕೇಶ್ವರಿ ದೇವಸ್ಥಾನದ ಶ್ರೀ ಭರತ ಸ್ವಾಮಿ, ಮುಖಂಡರಾದ ರಾಜಗೋಪಾಲರೆಡ್ಡಿ, ಲಚ್ಚಪ್ಪ ಜಮಾದಾರ, ಮಲ್ಲಿಕಾಜರ್ುನ ಎಮ್ಮೆನೊರ್, ದೇವಿಂದ್ರ ಅರಣಕಲ್, ಶಿವಕುಮಾರ ಸುಣಗಾರ ಮಾತನಾಡಿದರು. ತಹಸೀಲ್ದಾರ್ ಉಮಾಕಾಂತ ಹಳ್ಳೆ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ದೇವಿಂದ್ರ ತಳವಾರ, ಮಲ್ಲಣ್ಣ ಸಣಮೊ, ಗುರುನಾಥ ಗುದಗಲ್, ಶರಣು ಡೋಣಗಾಂವ, ಸುರೇಶ ಬೇನಕನಳ್ಳಿ, ನಿಂಗಣ್ಣ ಹೆಗಲೇರಿ, ಮುನೆಪ್ಪ ಕೊಳ್ಳಿ, ದಶರಥ ದೊಡ್ಮನಿ, ಲಿಂಗಣ್ಣ ಅಲ್ಲೂರ್, ದತ್ತಾತ್ರೇಯ ಬುಕ್ಕನ್, ಮಲ್ಲಿಕಾರ್ಜುನ ಡಾಂಗೆ, ಸಾಬಣ್ಣ ಭರಾಟೆ, ಮಲ್ಲಿಕಾರ್ಜುನ ಅಲ್ಲೂರ್, ಮಲ್ಲಿಕಾರ್ಜುನ ಸಂಗಾವಿ, ಶರಣಪ್ಪ ಇಸ್ಬಾ, ಮೋನೇಶ ಭಂಕಲಗಿ, ಗುಂಡಪ್ಪ ಐನಾಪುರ, ಇದ್ದರು.