ಮೈಸೂರು: ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ, ಎಸ್‌ಜೆಸಿ ಕಾಲೇಜಿನಲ್ಲಿ ಶನಿವಾರ ಹಾಗೂ ಭಾನುವಾರ ಮುಕ್ತದಿನ (ಓಪನ್ ಡೇ) ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜೆಎಸ್‌ಎಸ್ ತಾಂತ್ರಿಕ ವಿಭಾಗದ ನಿರ್ದೇಶಕ ಡಾ. ಬಿ. ಸುರೇಶ್ ಅವರು, ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಆವರಣ ಹಬ್ಬದ ವಾತಾವರಣದಲ್ಲಿ ಕಂಗೊಳಿಸುತ್ತಿತ್ತು. ಸುಮಾರು 12 ಸಾವಿರಕ್ಕೂ ಹೆಚ್ಚು ಪಾಲಕರು, ಮುಂದಿನ ತಾಂತ್ರಿಕ ಶಿಕ್ಷಣ ಪಡೆಯಲಿಚ್ಛಿಸುವ ಮಕ್ಕಳು, ತಾಂತ್ರಿಕ ಶಿಕ್ಷಣ ಹಾಗೂ ಇಲ್ಲಿನ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡರು. ತಾಂತ್ರಿಕವಾಗಿ ಎಲ್ಲ್ಲ ವಿಭಾಗಗಳು, ಎಂಬಿಎ ಕೋರ್ಸ್‌ಗೆ ಸಂಬಂಧಿಸಿದಂತೆ ಹೊಸ ಯೋಜನೆ, ಸಂಶೋಧನಾ ಕಾರ್ಯಕ್ರಮಗಳು ಹಾಗೂ ಸಂಶೋಧನಾ ವಿಭಾಗಗಳಲ್ಲಿ ಆಸಕ್ತಿಯಿಂದ ಪಾಲಕರು, ವಿದ್ಯಾರ್ಥಿಗಳು ನೆರೆದಿದ್ದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಹಾರ ಮೇಳ, ಉದ್ಯೋಗ ಮಾಹಿತಿ, ಎಡಿಟೋರಿಯಲ್ ಬೋರ್ಡ್‌ನಿಂದ ಸಮೂಹ ನೃತ್ಯ, ಸಮೂಹ ಗಾಯನ, ಕಿರುನಾಟಕ, ಆಟೋಟ, ಜಾಹಿರಾತುಗಳ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.