ಕಲಬುರಗಿ: ನೇರ, ನಿಷ್ಠುರ ರಾಜಕಾರಣಿ, ಸಾಮಾಜಿಕ ಹೋರಾಟಗಾರರಾದ ಮಾಜಿ ಸಚಿವ ಶಿವರುದ್ರಪ್ಪ ಕರಿಸಿದ್ದಪ್ಪ ಕಾಂತಾ (ಎಸ್.ಕೆ.ಕಾಂತಾ) ಅವರಿಗೆ ರಾಜ್ಯ ಸರ್ಕಾರ ೨೦೨೪-೨೫ನೇ ಸಾಲಿನ ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿ ಘೋಷಿಸಿದೆ.
ಮೂಲತಃ ಕಲಬುರಗಿ ಜಿಲ್ಲೆಯ ಹಾಗರಗುಂಡಗಿ ಗ್ರಾಮದವರಾದ ಕಾಂತಾ, ಡಿ.ದೇವರಾಜ ಅರಸು ತತ್ವ, ಸಿದ್ಧಾಂತ, ಆದರ್ಶ ಮೈಗೂಡಿಸಿಕೊಂಡು ಅನುಷ್ಠಾನಕ್ಕೆ ತರಲು ಶ್ರಮಿಸಿದ್ದಾರೆ. ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆಯ ಆಯ್ಕೆ ಸಮಿತಿ ಸರ್ಕಾರಕ್ಕೆ ಕಾಂತಾ ಹೆಸರು ಶಿಫಾರಸು ಮಾಡಿತ್ತು. ಸಮಿತಿ ಶಿಫಾರಸಿನಂತೆ ರಾಜ್ಯ ಸರ್ಕಾರ ಕಾಂತಾ ಹೆಸರು ಪ್ರಕಟಿಸಿ ಆದೇಶ ಹೊರಡಿಸಿದೆ.
೧೯೩೭ರ ಡಿ.೨೯ರಂದು ಜನಿಸಿದ ಕಾಂತಾ ಕಲಬುರಗಿಯ ಮಕ್ತಂಪುರ ಗದ್ದುಗೆ ಮಠದಲ್ಲಿ ಪ್ರಾಥಮಿಕ ಶಿಕ್ಷಣ, ಆಸೀಫ್ ಗಂಜ್ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದರು. ಇಂಗ್ಲಿಷ್ ಬರವಣಿಗೆ ಚನ್ನಾಗಿದ್ದ ಕಾರಣ ಕಲಬುರಗಿಯ ಎಂಎಸ್‌ಕೆ ಮಿಲ್‌ನಲ್ಲಿ ೧೯೫೬ನೇ ಸಾಲಿನಲ್ಲಿ ನೌಕರಿ ದೊರೆಯಿತು. ೧೯೬೨- ೬೩ರಲ್ಲಿ ಟ್ರೇಡ್ ಯೂನಿಯನ್ ಸೋಷಿಯಲಿಸ್ಟ್ ಪP್ಷÀ ಸೇರ್ಪಡೆಯಾದರು. ೧೯೬೭ರ ಫೆಬ್ರವರಿಯಲ್ಲಿ ಸೊಲ್ಲಾಪುರದ ಉಮ್ರಾಜ್ಕರ್ ಮನೆತನದ ಶೋಭಾ ಅವರೊಂದಿಗೆ ವಿವಾಹವಾಯಿತು.
ಡಾ.ವಿ.ಪಿ.ದೇವುಳಗಾಂವಕರ್ ನೇತೃತ್ವದಲ್ಲಿ ಸೋಷಿಯಾಲಿಸ್ಟ್ ಪP್ಷÀದಲ್ಲಿ ಸೇವೆ ಆರಂಭಿಸಿದರು. ಕ್ಲರ್ಕ್ ಯೂನಿಯನ್ ನೌಕರರ ಸಭಾ, ಹಿಂದ್ ಮಜ್ದೂರ್ ಸಭಾ ಜಿ¯್ಲÁಧ್ಯP್ಷÀರಾಗಿ ನೇಮಕಗೊಂಡರು. ೧೯೬೮-೬೯ರಲ್ಲಿ ಜಾರ್ಜ್ ಫರ್ನಾಂಡಿಸ್, ಮಧು ದಂಡವತೆ, ಲೋಹಿಯಾ, ಮಧು ಲಿಮಯೆ ಜತೆ ಸಂಪರ್ಕವಾಯಿತು.
ಹಿಂದ್ ಮಜ್ದೂರ್ ಸಭಾ ರಾಜ್ಯ ಘಟಕದ ಅಧ್ಯP್ಷÀರಾಗಿ ೧೯೭೧- ೭೨ನೇ ಸಾಲಿನಲ್ಲಿ ಚುನಾಯಿತರಾದರು. ಸುಮಾರು ೫೦ ಯೂನಿಯನ್‌ಗಳ ಅಧ್ಯP್ಷÀರಾಗಿ ಕಾರ್ಯನಿರ್ವಹಿಸಿದರು. ೧೯೭೭ರಲ್ಲಿ ಜನತಾ ಪP್ಷÀದ ನಗರ ಅಧ್ಯP್ಷÀರಾಗಿದ್ದರು. ನಂತರ ಜಿ¯್ಲÁ ಉಪಾಧ್ಯP್ಷÀ ಮತ್ತು ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ೧೯೮೩ರಲ್ಲಿ ಜನತಾ ಪP್ಷÀದಿಂದ ಗುಲ್ಬರ್ಗ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ೧೯೮೫ರಲ್ಲಿ ಮರು ಆಯ್ಕೆಯಾದರು. ೧೯೮೭ ಮತ್ತು ೮೮ರಲ್ಲಿ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದರು. ಸುಮಾರು ೨೦ ತಿಂಗಳ ಸಚಿವರಾಗಿ ಕಾರ್ಯನಿರ್ವಹಿಸಿದರು.