ಚಿಕ್ಕಮಗಳೂರು: ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪಾಲಕರ ಸಹಕಾರವಿದ್ದಲ್ಲಿ ಯಾವುದೇ ಕ್ಷೇತ್ರದಲ್ಲೂ ಉನ್ನತ ಸ್ಥಾನಮಾನ ಗಳಿಸಬಹುದು ಎಂದು ಯುರೇಕಾ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ದೀಪಕ್‌ದೊಡ್ಡಯ್ಯ ತಿಳಿಸಿದರು.
ತಾಲೂಕಿನ ವಸ್ತಾರೆ ಹೋಬಳಿಯ ಬಸ್ಕಲ್ ಗ್ರಾಮದ ವಿದ್ಯಾರ್ಥಿ ಕುನಾಲ್ ರವಿರೇಜ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೪ ಅಂಕಗಳಿಸಿದ ಹಿನ್ನೆಲೆಯಲ್ಲಿ ಯುರೇಕಾ ಅಕಾಡೆಮಿಯಿಂದ ವಿದ್ಯಾರ್ಥಿ ಸ್ವಗೃಹಕ್ಕೆ ತೆರಳಿ ಅಭಿನಂದಿಸಿ ಮಾತನಾಡಿದರು.
ಗ್ರಾಮೀಣ ಮಕ್ಕಳು ಅಧ್ಯಯನ ಮಾಡುವ ಶಾಲೆಗಳು ಸ್ವಚ್ಚಂಧ ಪರಿಸರ, ಪರಿಣಿತ ಶಿಕ್ಷಕರಿಂದ ಕೂಡಿರುತ್ತಾರೆ. ಶಿಕ್ಷಕರು ಪ್ರೋತ್ಸಾಹ, ಪಾಲಕರ ಸಹಕಾರವಿದ್ದರೆ ಸಮಾಜದ ಮುಖ್ಯ ವ್ಯಕ್ತಿಯಾಗಿ ರೂಪುಗೊಳ್ಳಬಹುದು. ಹೀಗಾಗಿ ಆಸಕ್ತಿಯಿರುವ ಕ್ಷೇತ್ರದಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ವಿಶೇಷವಾಗಿ ಕುನಾಲ್ ರವಿತೇಜ ವ್ಯಾಸಂಗ ಪೂರೈಸಿ ವೈದ್ಯಕೀಯ ಕ್ಷೇತ್ರವನ್ನು ಆರಿಸಿಕೊಳ್ಳುವ ಜೊತೆಗೆ ಸ್ವಗ್ರಾಮದಲ್ಲೇ ಸೇವೆ ಸಲ್ಲಿಸುವ ಗುರಿ ಹೊಂದಿರುವುದು ಹೆಮ್ಮೆಯ ಸಂಗತಿ. ಈ ರೀತಿಯಲ್ಲೇ ಪ್ರತಿಯೊಬ್ಬ ವಿದ್ಯಾರ್ಥಿಗಳು ಗುರಿ ಹೊಂದುವ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಸಂಗತಿ ಎಂದರು.
ಗ್ರಾಮಾAತರ ಪ್ರದೇಶಗಳ ಮಕ್ಕಳು ಜೀವನದ ಕಷ್ಟ-ಸುಖಗಳನ್ನು ಎಲ್ಲವೂ ಗಮನಿಸಿರುತ್ತಾರೆ. ಹೀಗಾಗಿ ಪಾಲಕರ ಪರಿಶ್ರಮಕ್ಕೆ ನಿರಾಸೆ ಮಾಡದೇ ಓದುವ ಜವಾಬ್ದಾರಿ ಹೊರಬೇಕು. ಇದಾದ ಬಳಿಕ ಯಶಸ್ಸಿನ ಮೆಟ್ಟಿಲು ದೊರಕುವುದು ಖಚಿತ ಎಂದ ಅವರು ಕಲಿಕೆಯ ವಯಸ್ಸಿನಲ್ಲಿ ಯಾರೂ ಕೂಡಾ ಸಮಯ ವ್ಯರ್ಥ ಗೊಳಿಸದಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪಾಲಕರಾದ ಮಮತಾ ರವಿಕುಮಾರ್, ಜೆಡಿಎಸ್ ಮುಖಂಡ ಭೈರೇಗೌಡ, ಮುಖಂಡರಾದ ಸಚಿನ್‌ಸಿಂಗ್, ಶಶಿ ಮತ್ತಿತರರು ಇದ್ದರು.