ಜಿಲ್ಲೆ

ಎಸ್‌ಎಲ್‌ವಿ ಕಾಲೇಜಿಗೆ ಉತ್ತಮ ಫಲಿತಾಂಶ

ಚಿತ್ರದುರ್ಗ: ಜೆಇಇ ರಾಷ್ಟ್ರ ಮಟ್ಟದ ಮುಖ್ಯ ಪರೀಕ್ಷೆಯಲ್ಲಿ ನಗರದ ಎಸ್‌ಎಲ್‌ವಿ ಪದವಿಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿದ್ದು, 20 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಎಲ್.ಸಂತೋಷ್‌ಕುಮಾರ್, ಬಿ.ಬೊಮ್ಮಲಿಂಗ, ವೈ.ಉಷಾ ಸೇರಿದಂತೆ 20 ವಿದ್ಯಾರ್ಥಿಗಳು ಅರ್ಹತೆ ಹೊಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಎಚ್.ಚಂದ್ರಕಲಾ, ಮುಖ್ಯಕಾರ‌್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್, ಪ್ರಾಂಶುಪಾಲ ಕೇಶವಮೂರ್ತಿ, ಸಂಯೋಜಕ ಕೊಟ್ರೇಶ್ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.