ಜಿಲ್ಲೆ

ಎಸ್‌ಆರ್‌ಎಸ್‌ಶಾಲೆಯಲ್ಲಿ ಪಾಲಕರ ಪಾದ ಪೂಜೆ

ಚಿತ್ರದುರ್ಗ:ನಗರದ ಎಸ್ ಆರ್‌ಎಸ್‌ಹೆರಿಟೇಜ್ ಶಾಲೆಯಲ್ಲಿ ಸೋಮವಾರ ಗುರುಪೂರ್ಣಿಮೆ ಅಂಗವಾಗಿ ವಿದ್ಯಾರ್ಥಿಗಳು ಪಾಲಕರ ಪಾದ ಪೂಜೆ ನೆರವೇರಿಸಿದರು. 3ರಿಂದ 8ನೇ ತರಗತಿ ವಿದ್ಯಾರ್ಥಿಗಳು ಕಾರ‌್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶ್ಲೋಕ ಪಾರಾಯಣ ನಡೆಯಿತು. ಎಸ್‌ಆರ್‌ಎಸ್ ಸಮೂಹ ಸಂಸ್ಥೆಗಳ ಕಾರ‌್ಯದರ್ಶಿ ಸುಜಾತ ಲಿಂಗಾರೆಡ್ಡಿ ಗಣಪತಿ, ವೇದ ವ್ಯಾಸರ ಮತ್ತು ಶ್ರೀ ಶಾರದ ದೇವಿ ಪೂಜೆ ಮೂಲಕ ಕಾರ‌್ಯಕ್ರಮಕ್ಕೆ ಚಾಲನೆ ನೀಡಿದರು. ಗುರುಪೂರ್ಣಿಮೆ ವಿಶೇಷತೆ ಕುರಿತು ಪಾಲಕರು ಮಾತನಾಡಿದರು. ಬೋಧಕರು,ಬೋಧಕೇತರ ಸಿಬ್ಬಂದಿ ಇದ್ದರು.