ಜಿಲ್ಲೆ

ಎಸ್‌ಆರ್‌ಎಸ್ ಶಾಲಾ ಆರಂಭೋತ್ಸವಕ್ಕೆ ವೀರಗಾಸೆ ಮೆರುಗು

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆ ಮರು ಆರಂಭೋತ್ಸವ ಸೋಮವಾರ ಶಾಲಾ ಆವರಣದಲ್ಲಿ ನಡೆಯಿತು.
ತಳಿರು ತೋರಣಗಳಿಂದ ಶಾಲೆಯನ್ನು ಅಲಂಕರಿಸಲಾಗಿತ್ತು. ಕಾರ‌್ಯಕ್ರಮಕ್ಕೆ ವೀರಗಾಸೆ ವಿಶೇಷ ಮೆರುಗು ನೀಡಿತು. ಶಿಕ್ಷಕರು, ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳನ್ನು ಸಡಗರದಿಂದ ಬರ ಮಾಡಿಕೊಂಡರು.
ಆರತಿ ಬೆಳಗಿ, ತಿಲಕವಿಟ್ಟು, ಹೂ ಮತ್ತು ಅಕ್ಷತೆ ಹಾಕುವುದರೊಂದಿಗೆ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಾಗತಿಸಿದರು. ಆಡಳಿತ ಮಂಡಳಿ ಪ್ರಮುಖರು ಮಕ್ಕಳಿಗೆ ಶುಭ ಕೋರಿದರು.
ಎಸ್‌ಆರ್‌ಎಸ್ ಶಿಕ್ಷಣ ಸಮೂಹ ಸಂಸ್ಥೆ ಉಪಾಧ್ಯಕ್ಷ ಬಿ.ಎಲ್.ಅಮೋಘ್, ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ, ಪ್ರಾಚಾರ್ಯ ಎಂ.ಎಸ್.ಪ್ರಭಾಕರ್, ಎಂ.ಎಸ್.ಅರ್ಪಿತಾ ಮತ್ತಿತರರು ಇದ್ದರು.