ಬೆಳಗಾವಿ: ನಗರದ ಎಸ್. ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಕಾಲೇಜಿನ ಮಹಿಳಾ ಸಬಲೀಕರಣ ಕೋಶದ ಅಡಿಯಲ್ಲಿ ಬಿಎಚ್ಎಸ್ ಹಾಸ್ಪಿಟಲ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಮಹಾವಿದ್ಯಾಲಯದ ಸುಮಾರು 125ಕ್ಕೂ ಹೆಚ್ಚು ಸಿಬ್ಬಂದಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ ತೂಕ, ಎತ್ತರ, ಶುಗರ್ ಚೆಕ್, ಬಿ.ಪಿ ಹಾಗೂ ಕ್ಯಾಲ್ಸಿಯಂ ಕುರಿತಾಗಿ ತಪಾಸಣೆ ನಡೆಸಲಾಯಿತು, ವೈದ್ಯಾಧಿಕಾರಿಗಳ ಸಹಿತ 10-12 ಜನ ತಾಂತ್ರಿಕ ಸಿಬ್ಬಂದಿ ಭಾಗವಹಿಸಿದ್ದರು. ಬಳಿಕ ವಿಶ್ವ ಬೆನ್ನುಹುರಿ ಗಾಯದ ದಿನದ ಅಂಗವಾಗಿ ಮೂಳೆ ಮತ್ತು ಬೆನ್ನು ಮೂಳೆಯ ಶಸ್ತ್ರಚಿಕಿತ್ಸಕ ಡಾ.ಕೀರ್ತಿರಾಯ ಮಾನೆ ಅವರು, ಬೆನ್ನು ಹುರಿಯ ಬಗ್ಗೆ ಹೇಗೆ ಕಾಳಜಿ ತೆಗೆದುಕೊಳ್ಳಬೇಕು. ಬೆನ್ನುಹುರಿಯಿಂದಾಗುವ ತೊಂದರೆಗಳು ಮತ್ತು ಅವುಗಳಿಗೆ ಪರಿಹಾರಗಳ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಬಿ. ಆರ್.ಪಟಗುಂದಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.