ಜಿಲ್ಲೆ

ಎಸ್.ಜಗದೀಶ್ ಇನ್ಸ್‌ಪೆಕ್ಟರ್ ಹುದ್ದೆಗೆ ನೇಮಕ

ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮದ ನಿವಾಸಿ ಎಸ್.ಜಗದೀಶ್ ಭಾರತ ಸರ್ಕಾರದ ಸ್ಟ್ಾ ಸೆಲೆಕ್ಷನ್ ಸಮಿತಿ ನಡೆಸುವ ಕಂಬೈನ್ಡ್ ಗ್ರಾಜುಯೇಷನ್ ಲೆವೆಲ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯಲ್ಲಿ ಕಸ್ಟಮ್ ಮತ್ತು ಎಕ್ಸೈಸ್ ಇನ್ಸ್‌ಪೆಕ್ಟರ್ ಹುದ್ದೆಗೆ ನೇಮಕಗೊಂಡಿದ್ದಾರೆ.

ಗ್ರಾಮದ ಹಿರಿಯ ರಂಗ ಕಲಾವಿದ ಘಟಂ ಕೃಷ್ಣ ಅವರ ಮೊಮ್ಮಗ ಎಸ್.ಜಗದೀಶ್. ಇವರಿಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರೋಜ್ಗಾರ್ ಮೇಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ನಲ್ಲಿದ್ದ ವೇಳೆ ನೇಮಕಾತಿ ಪತ್ರವನ್ನು ನೀಡಲಾಗಿದೆ.