ಜಿಲ್ಲೆ

ಎಸ್.ಗಂಗನಾಳದ ಪಂಚಪಕ್ಷಿ ಮಾರುತೇಶ್ವರ ರಥೋತ್ಸವ ನ.24ಕ್ಕೆ: ವಿವಿಧ ಕಾರ್ಯಕ್ರಮ, ಸ್ಪರ್ಧೆ ಆಯೋಜನೆ

ತಾವರಗೇರಾ, ಎಸ್.ಗಂಗನಾಳ ಗ್ರಾಮ, ಮಹಾ ರಥೋತ್ಸವ, ಪಂಚಪಕ್ಷಿ ಮಾರುತೇಶ್ವರ,
Tavaragera, S.Ganganala Village, Maha Rahotsava, Panchapakshi Maruteshwar,
ತಾವರಗೇರಾ: ಎಸ್.ಗಂಗನಾಳ ಗ್ರಾಮದ ಪಂಚಪಕ್ಷಿ ಮಾರುತೇಶ್ವರ ಜಾತ್ರೆ ನಿಮಿತ್ತ ನ.24ರಂದು ಮಹಾ ರಥೋತ್ಸವ ನಡೆಯಲಿದೆ. ಜಾತ್ರೆ ಅಂಗವಾಗಿ ನ.23ರಂದು ಕಾರ್ತಿಕೋತ್ಸವ, 24ರಂದು ಮಾರುತೇಶ್ವರ ಉಧ್ಬವ ಮೂರ್ತಿಗೆ ರುದ್ರಾಭಿಷೇಕ, ಹೂವು, ಆಭರಣಗಳ ಆಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಸಕಲ ಮಂಗಳ ವಾದ್ಯಗಳೊಂದಿಗೆ ರಥೋತ್ಸವ ನಡೆಯಲಿದೆ ಎಂದು ಜಾತ್ರೆ ಸಮಿತಿ ಅಧ್ಯಕ್ಷ, ನಿವೃತ್ತ ಆಯುಕ್ತ ಸಂಗಪ್ಪ ಹೆರೂರ ತಿಳಿಸಿದ್ದಾರೆ.

ಕಬಡ್ಡಿ, ಉಸುಕಿನ ಚೀಲ ಎತ್ತುವ ಸ್ಪರ್ಧೆ: ನ.23ರಂದು ದೇವಸ್ಥಾನದ ಆವರಣದಲ್ಲಿ ಕಬ್ಬಡಿ ಪಂದ್ಯಾವಳಿ ಹಾಗೂ ನ.24ರಂದು ಒಂದು ಕ್ವಿಂಟಾಲ್ ಭಾರದ ಉಸುಕಿನ ಚೀಲ ಎತ್ತುವ ಸ್ಪರ್ಧೆ ಆಯೋಜಿಸಲಾಗಿದೆ. ಕಬಡ್ಡಿಯಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ನಗದು ಹಾಗೂ ಉಸುಕಿನ ಚೀಲ ಎತ್ತಿ ಗೆದ್ದವರಿಗೆ ಬೆಳ್ಳಿ ಕಡಗ ನೀಡಲಾಗುತ್ತದೆ.