ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಎಸ್. ಎಸ್. ಶೆಟ್ಟರ್ ಫೌಂಡೇಷನ್ಗಳ ಆಶ್ರಯದಲ್ಲಿ ನಗರದ ಕುಸುಗಲ್ಲ್ ರಸ್ತೆಯಲ್ಲಿರುವ ವೇದಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ಎಸ್. ಎಸ್. ಶೆಟ್ಟರ್ ಅವರ ಪುಣ್ಯ ಸ್ಮರಣೆ ನಿಮಿತ್ತ ಎಸ್.ಎಸ್. ಶೆಟ್ಟರ್ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿ, ಎಸ್.ಎಸ್. ಶೆಟ್ಟರ್ ಅವರ ಜನಪರ ಕಾಳಜಿ ಮತ್ತು ಅವರು ಬದುಕಿದ ರೀತಿ ಎಲ್ಲರಿಗೂ ಮಾದರಿ ಎಂದರು.
ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಮಾತನಾಡಿ, ಎಸ್. ಎಸ್. ಶೆಟ್ಟರ್ ಅವರು ನಮ್ಮ ಕುಟುಂಬದ ಮುಕುಟಮಣಿ ಇದ್ದಂತೆ. ಕಾಯಕವೇ ಕೈಲಾಸ ಎಂಬ ದಾರಿಯಲ್ಲಿ ಬದುಕಿ ಸರಳತೆಯಿಂದ ಜೀವನ ನಡೆಸಿದ್ದರು. ವೃತ್ತಿಯಿಂದ ವಕೀಲರಾಗಿದ್ದರೂ ಹಣದ ಆಸೆಗೆ ಎಂದು ಬೀಳದೆ ಅನೇಕ ಕುಟುಂಬಗಳನ್ನು ಒಂದು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜನ ಸಂಘದ ದಕ್ಷಿಣ ಭಾರತದ ಮೊದಲ ಮೇಯರ್ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದರು ಎಂದು ಹೇಳಿದರು.
ಮಲ್ಲಿಕಾರ್ಜುನ ಸಾವುಕಾರ ಮಾತನಾಡಿ ಶೆಟ್ಟರ್ ಅವರ ಜತೆಗಿನ ಒಡನಾಟವನ್ನು ನೆನಪಿಸಿಕೊಂಡಜಜರು. ಗೋಕುಲದ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಫ್. ಬಿ. ಸೊರಟೂರ, ಅಂಜುಮನ್ ಕಾಲೇಜ್ ಸಹ ಪ್ರಾಧ್ಯಾಪಕ ಪೊ›. ರುದ್ರೇಶ್ ಮೇಟಿ ಉಪನ್ಯಾಸ ನೀಡಿದರು. ಪೊ›. ಬಸವರಾಜ ಜಾನಪದ ಗೀತೆ ಹಾಡಿದರು.
ಮೋಹನ ಶೆಟ್ಟರ್, ನಾಗೇಶ ಕಲ್ಬುರ್ಗಿ, ವಿದ್ಯಾ ವಂಟಮುರಿ, ಶ್ರದ್ಧಾ ಸಂಕಲ್ಪ ಶೆಟ್ಟರ್, ಪೊ›. ಕೆ.ಎಸ್ ಕೌಜಲಗಿ, ಇತರರು ಇದ್ದರು.