ಜಿಲ್ಲೆ

ಎಸಿ ಸೇರಿ ಹಲವರ ವಿರುದ್ಧ ದೂರು ದಾಖಲು

ಚಿಕ್ಕನಾಯಕನಹಳ್ಳಿ:- ಜಮೀನೊಂದರ ಮೂಲ ಮಾಲೀಕರನ್ನೇ ಬದಲಾಯಿಸಿ ಬೇರೆ ವ್ಯಕ್ತಿಯನ್ನು ಮಾಲೀಕರೆಂದು ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿ ಮಾರಾಟ ಮಾಡಿರುವ ಕುರಿತು ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ಉಪನೋಂದಣಾಧಿಕಾರಿ ಸೇರಿ ಹಲವರ ವಿರುದ್ಧ ದೂರು ದಾಖಲಾಗಿದೆ. ತಾಲೂಕಿನ ಕಸಬಾ ಹೋಬಳಿ ದಬ್ಬೇಘಟ್ಟ ಗ್ರಾಮದ ಸರ್ವೇ ನಂ.23/3ಬಿನಲ್ಲಿ 1.12ಎಕರೆ ಹಾಗೂ ಸರ್ವೇ ನಂ. 23/5ಬಿಯಲ್ಲಿ 11 ಗುಂಟೆ ಹಾಗೂ 25/6ಬಿ ನಲ್ಲಿ 11 ಗುಂಟೆ ಜಮೀನಿನ ಮಾಲೀಕ ಸಿ.ವಿ.ಮಲ್ಲಿಕಾರ್ಜುನಯ್ಯ. ಆದರೆ, ಬೇರೆ ವ್ಯಕ್ತಿ ಮಾಲೀಕರೆಂದು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ 2024ರ ಡಿಸೆಂಬರ್​ 21ರಂದು ಸಿಎಕೆಎಲ್​-1-04340/2024-25ರಲ್ಲಿ ನೋಂದಾಯಿಸಿ, ಬಳಿಕ ಸಚಿನ್​ ಎಂಬುವವರ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಿ.ವಿ.ಮಲ್ಲಿಕಾರ್ಜುನಯ್ಯ ನೀಡದ ದೂರಿನ ಮೇರೆಗೆ ಜಿಲ್ಲಾ ಪತ್ರ ಬರಗಾರ ಸಂತೋಷ್​ಕುಮಾರ್​, ಕಿರಣ್​ ಟಿ.ಸಿ., ಲೊಕೇಶ್​, ಸಚಿನ್​ ಹಾಗೂ ಉಪನೋಂದಣಾಧಿಕಾರಿ ರಾಘುವೇಂದ್ರ ಒಡೆಯರ್​ ವಿರುದ್ಧ ಜ.17ರಂದು ಪ್ರಕರಣ ದಾಖಲಾಗಿದೆ.