ಕನ್ನಡ ಜಾನಪದ ಪರಿಷತ್ ಕಳಸ ಘಟಕದಿಂದ ಸಂಕ್ರಾಂತಿ ಹಬ್ಬ ಆಚರಿಸಲಾಯಿತು. ಕಜಾಪ ಅಧ್ಯಕ್ಷ ಅಜಿತ್ ಪ್ರಸಾದ್, ಸುಜಯಾ ಪಾಂಡುರಂಗ, ವಿನಾಯಕ, ಮಂಜುಳಾ, ರಾಧಿಕಾ, ದಿವ್ಯಾ ಇತರರಿದ್ದರು.  
ಜಿಲ್ಲೆ

ಎಳ್ಳುಬೆಲ್ಲ ಹಂಚಿದ ಕಜಾಪ

ಕಳಸ: ಕನ್ನಡ ಜಾನಪದ ಪರಿಷತ್ ಕಳಸ ಘಟಕ ಹಾಗೂ ಮಹಿಳಾ ಘಟಕದಿಂದ ವರ್ಷದ ಮೊದಲನೇ ಹಬ್ಬ ಹಾಗೂ ರೈತರ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಪರಿಷತ್ತಿನ ಸದಸ್ಯರು ಎಳ್ಳುಬೆಲ್ಲ ಹಂಚಿ ಶುಭಕೋರಿದರು. ಕಜಾಪ ಅಧ್ಯಕ್ಷ ಅಜಿತ್ ಪ್ರಸಾದ್ ಮಾತನಾಡಿ, ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಸಂಕ್ರಮಣ ಕಾಲ ಪುಣ್ಯಪ್ರದ ಎಂಬ ನಂಬಿಕೆ ಇದೆ. ಸಂಕ್ರಾಂತಿ ಹಬ್ಬ ನಾಡಿನ ಜನತೆಗೆ ಒಳಿತು ಮಾಡಲಿ ಎಂದು ಆಶಿಸಿದರು.

ಕಜಾಪ ಮಹಿಳಾ ಘಟಕದ ಅಧ್ಯಕ್ಷೆ ಸುಜಯಾ ಸದಾನಂದ ಮಾತನಾಡಿ, ಸಂಕ್ರಾಂತಿ ಹಬ್ಬದಲ್ಲಿ ಜಾನಪದ ಸೊಗಡನ್ನು ಕಾಣಬಹುದು. ಆಧುನಿಕತೆ ಅಬ್ಬರದ ಮಧ್ಯೆಯೂ ಸಂಪ್ರದಾಯ, ನಂಬಿಕೆ, ಹಬ್ಬ ಆಚರಣೆಗಳು ಜೀವಂತವಾಗಿವೆ. ಹಬ್ಬಗಳ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಅಗತ್ಯತೆ ಇದೆ ಎಂದು ಹೇಳಿದರು.

ಕಸಾಪ ಜಿಲ್ಲಾ ಸಂಚಾಲಕ ಪಾಂಡುರಂಗ, ಕಜಾಪ ಉಪಾಧ್ಯಕ್ಷ ವಿನಾಯಕ, ಕಾರ್ಯದರ್ಶಿ ಭರತ್‌ರಾಜ್, ಪ್ರೇಮ್‌ಕುಮಾರ್, ಕಲ್ಪನಾ ಅಜಿತ್, ಶರೀಪ್, ಅನಿಲ್, ಅಮಿತ ವಿನಾಯಕ, ಮಂಜುಳಾ, ರಾಧಿಕಾ, ದಿವ್ಯಾ, ಸೌಭಾಗ್ಯಾ, ಪ್ರತಿಮಾ, ಉಷಾ ಇದ್ದರು.