ಹನೂರು: ತಾಲೂಕಿನ ಎಲ್ಲೇಮಾಳ ಸರ್ಕಾರಿ ಪ್ರೌಢಶಾಲೆಗೆ ಭಾನುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಸಿದ್ಧತೆ ಸಂಬಂಧ ಅಗತ್ಯ ಸಲಹೆ ನೀಡಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟ. ಪ್ರತಿಯೊಬ್ಬರೂ ಚೆನ್ನಾಗಿ ಅಧ್ಯಯನ ಮಾಡಬೇಕು. ಈಗಾಗಲೇ ತಯಾರಿಸಿಕೊಂಡಿರುವ ವಿಷಯವಾರು ವೇಳಾಪಟ್ಟಿಯಂತೆ ಓದಿನ ಜತೆಗೆ ಹೆಚ್ಚು ಬರೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು. ವಿಷಯ ಸಂಬಂಧಿತ ಸಮಸ್ಯೆ ಇದ್ದಲ್ಲಿ ಆಯಾಯ ಶಿಕ್ಷಕರಿಂದ ಸಮಸ್ಯೆ ಪರಿಹಾರ ಕಂಡುಕೊಳ್ಳುವುದರ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು. ಶಿಕ್ಷಕರು ಸಹ ಪರೀಕ್ಷೆಯಲ್ಲಿ ಅನುಸರಿಸುವ ಸರಳ ತಂತ್ರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು ಎಂದು ಸೂಚಿಸಿದರು.
ಬಿಆರ್‌ಸಿ ಕಂದವೇಲು, ಶಿಕ್ಷಕ ವೇಣುಗೋಪಾಲ್, ವಿದ್ಯಾರ್ಥಿಗಳು ಇದ್ದರು.