ಜಿಲ್ಲೆ

ಎಲ್ಲೆಡೆ ಜನತಾ ಕಾರ್ಪ್ಯೂ ಚರ್ಚೆ


ವಾದಿರಾಜ ವ್ಯಾಸಮುದ್ರ ಕಲಬುರಗಿ
ಕರೊನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನತಾಕಾರ್ಪ್ಯೂ ಘೋಷಿಸಿರುವುದು ವ್ಯಾಪಕ ಚರ್ಚೆ ಕಾರಣವಾಗಿದೆ.
ಕಾರ್ಪ್ಯೂಗೆ ಸಹಕರಿಸಲು ಜನತೆ ಖುದ್ದು ಮುಂದೆ ಬಂದಿದ್ದು, ಯಾರೂ ಮಾತನಾಡುವಂತಿಲ್ಲ. ಕರೊನಾದಿಂದ ಕಲಬುರಗಿಯಲ್ಲಿ ಮೊದಲ ಸಾವು ಸೇರಿ ದೇಶದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದು, ಅನೇಕರು ಬಳಲುತ್ತಿದ್ದಾರೆ. ಸೋಂಕಿನ ವಿರುದ್ಧ ಸಮರ ಸಾರಿರುವ ಪ್ರಧಾನಿ ಮೋದಿ ಜನತಾ ಕಫ್ಯರ್ೂ ಕರೆ ಕೊಡುವ ಮೂಲಕ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಬಹುದೊಡ್ಡ ಹೆಜ್ಜೆ ಇಟ್ಟಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ, ಕರೊನಾ ವೈರಸ್ 12 ತಾಸು ಮಾತ್ರ ಬದುಕಿರಬಲ್ಲದು. ಭಾನುವಾರದ ಕಫ್ಯರ್ೂ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ (14 ತಾಸು). ಹೀಗಾಗಿ ವೈರಸ್ ಕೆಲ ಸಮಯವಾದರೂ ನಿಯಂತ್ರಿಸಬಹುದು ಎಂಬುದು ಪ್ರಧಾನಿ ಉದ್ದೇಶ.
ಜನತಾ ಕಾರ್ಪ್ಯೂಗೆ ಕಲ್ಯಾಣ ಕರ್ನಾಟಕದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕಲಬುರಗಿ ಜಿಲ್ಲೆಯಲ್ಲಂತೂ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಿಲ್ಲಾಧಿಕಾರಿ ಬಿ.ಶರತ್ ನೇತೃತ್ವದಲ್ಲಿ ಕೈಗೊಂಡಿದ್ದು, ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಕೈ ಜೋಡಿಸಿವೆ.
ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪ್ರಮುಖ ದೇವಸ್ಥಾನಗಳ ದರ್ಶನ ನಿಲ್ಲಿಸಲಾಗಿದೆ. ಮಂದಿರ, ಮಸೀದಿ ಮತ್ತು ಚಚರ್್ಗಳಲ್ಲಿ ಜನತೆ ಗುಂಪು ಸೇರದಂತೆ ಎಚ್ಚರಿಕೆ ನೀಡಲಾಗಿದೆ. ಮಹಾರಾಷ್ಟ್ರಕ್ಕೆ ಹೋಗುವ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಖಾಸಗಿ ವಾಹನಗಳ ಸಂಚಾರ ರದ್ದುಪಡಿಸಲಾಗಿದೆ. ಹೆಚ್ಚೂ ಕಡಿಮೆ ಒಂದು ವಾರದಿಂದ ಕಲಬುರಗಿಯಲ್ಲಿ ಬಂದ್ ವಾತಾವರಣ ಇದೆ. ಇದೆಲ್ಲವನ್ನು ಅವಲೋಕಿಸಿದರೆ 22ರ ಕಫ್ಯರ್ೂ ಸಂಪೂರ್ಣ ಯಶಸ್ವಿಯಾಗುವ ನಿರೀಕ್ಷೆ ಇದೆ.
ವಾಟ್ಸ್ ಆ್ಯಪ್ಗಳಲ್ಲಿ ಚರ್ಚೆ
ಮೋದಿ ಕರೆ ಕೊಟ್ಟಿರುವ ಜನತಾ ಕಫ್ಯರ್ೂಗೆ ಕಲ್ಯಾಣ ಕನರ್ಾಟಕ ಜಿಲ್ಲೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಪೂರಕ ಚಚರ್ೆ ನಡೆದಿವೆ. ವಾಟ್ಸ್ ಆ್ಯಪ್, ಫೇಸ್ ಬುಕ್, ಟೆಲಿಗ್ರಾಮ್ ಸೇರಿ ಎಲ್ಲ ಕಡೆ ಮೆಸೇಜ್ಗಳು ಹರಿದಾಡುತ್ತಿವೆ.

ಭಾನುವಾರದ ಜನತಾ ಕಫ್ಯರ್ೂ ಯಶಸ್ವಿಗೊಳಿಸುವ ಮೂಲಕ ಸಾರ್ವಜನಿಕರು ಕರೊನಾ ವಿರುದ್ಧ ಪ್ರಧಾನಿ ಸಾರಿರುವ ಸಮರಕ್ಕೆ ಬೆಂಬಲ ನೀಡಬೇಕು. ಈ ಮೂಲಕ ಕರೊನಾ ಸೋಂಕು ನಿಯಂತ್ರಣಕ್ಕೆ ಸಹಕಾರ ಕೊಡಬೇಕು.
| ಚಂದು ಪಾಟೀಲ್
ಬಿಜೆಪಿ ಯುವ ಮುಖಂಡ


ಪ್ರಧಾನಿ ಮೋದಿ ಕರೆ ನೀಡಿದ ಕಫ್ಯರ್ೂಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 22ರಂದು ಖಂಡಿತವಾಗಿಯೂ ಕರೊನಾ ವಿರುದ್ಧ ದೊಡ್ಡ ಸಮರವೇ ನಡೆಯುತ್ತದೆ. ಇದರಲ್ಲಿ ಅನುಮಾನವೇ ಬೇಡ
| ಸಿದ್ದಾಜಿ ಪಾಟೀಲ್
ಜಿಲ್ಲಾಧ್ಯಕ್ಷ, ಬಿಜೆಪಿ ಮಹಾನಗರ ಘಟಕ