ಹಾಸನ: ಎಲ್ಲದಕ್ಕೂ ಮೂಲ ಶಕ್ತಿ ಸೂರ್ಯ. ಎಲ್ಲಿ ಆತನ ಬೆಳಕು ಇರುತ್ತದೆಯೋ ಅಲ್ಲಿ ಅಂಧಕಾರಕ್ಕೆ ಅವಕಾಶ ಇಲ್ಲ ಎಂಬುದನ್ನು ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಸಾವಿನಿಂದ ಅಮೃತತ್ವದ ಕಡೆಗೆ ಸಾಗುವುದೇ ನಿಜವಾದ ಶಿಕ್ಷಣ ಎಂದು ಹಾಸನ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ತಾರಾನಾಥ ಹೇಳಿದರು.
ನಗರದ ಹೇಮಾವತಿ ನಗರದಲ್ಲಿರುವ ಶ್ರೀರಂಗ ಮಹಾವಿದ್ಯಾಲಯದ ಪ್ರಥಮ ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗೆ ಈಚೆಗೆ ಹಮ್ಮಿಕೊಂಡಿದ್ದ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಕೂಡ ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ನಡೆದರೆ ಸಾಧಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಶಿಕ್ಷಕರಾಗುವವರು ಉತ್ತಮ ಕೌಶಲಗಳನ್ನು ರೂಢಿಸಿಕೊಂಡಾಗ ವಿದ್ಯಾರ್ಥಿಗಳಿಗೆ ನಗರ ಭಾಷಾ ಪ್ರಭುತ್ವದ ಹಿಡಿತ ಸಿಗುತ್ತದೆ. ಸರ್ವಜ್ಞನೆಂಬುವನು ಗರ್ವದಿಂದಾಗುವನೆ ಸರ್ವರೊಳಗೊಂದು ನುಡಿ ಕಲಿತು ವಿಂಧ್ಯದ ಪರ್ವತವೇ ಆದ ಸರ್ವಜ್ಞ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀರಂಗ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ.ಎಚ್.ಎಸ್. ಅನಿಲ್‌ಕುಮಾರ್, ಪ್ರಾಂಶುಪಾಲ ಡಿ.ಎಸ್. ನವೀನ್ ಕುಮಾರ್, ಸಂಸ್ಥೆಯ ವ್ಯವಸ್ಥಾಪಕ ಕೆ.ವಿ.ರಘು ಕುಮಾರ್, ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.