ಗೋಕಾಕ: ನಾವೆಲ್ಲರೂ ಒಂದೇ ಭಾವನೆಯಿಂದ ಈದ್ ಮಿಲಾದ್ ಮತ್ತು ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸೋಣ ಎಂದು ತಹಸೀಲ್ದಾರ್ ಡಾ.ಮೋಹನ ಭಸ್ಮೆ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ತಾಲೂಕಾಡಳಿತ, ಪೊಲೀಸ್ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡ ಶಾಂತಿಪಾಲನಾ ಸಭೆ ಅಧ್ಯತೆ ವಹಿಸಿ ಮಾತನಾಡಿದರು. ಗೌರಿ&ಗಣೇಶ ಚತುರ್ಥಿ ಪರಿಸರ ಸ್ನೇಹಿಯಾಗಿ ಆಚರಿಸಬೇಕು. ಹಸಿರು ಪಟಾಕಿ ಬಳಸಬೇಕು. ನೆಸರ್ಗಿಕ ಬಣ್ಣ ಬಳಸಿ ಗಣೇಶ ಹಬ್ಬ ಆಚರಿಸಬೇಕು. ಅಹಿತಕರ ಟನೆ ಆಗದಂತೆ ಎಲ್ಲರೂ ಶ್ರಮಿಸಬೇಕು ಎಂದರು.
ಪಿಎಸ್ಐ ಕೆ.ವಾಲಿಕರ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಅಗ್ನಿ ಅವಡ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ಎಂದರು. ಪೌರಾಯುಕ್ತ ರಮೇಶ ಜಾಧವ, ಎಂ.ಎಚ್. ಗಜಾಕೋಶ, ಎಸ್.ಪಿ.ವರಾಳೆ, ವಿನೋದ ಪಾಟೀಲ, ಅಗ್ನಿ ಶಾಮಕ ಠಾಣಾಧಿಕಾರಿ ಎಸ್.ಎನ್ ಮೆಳವಂಕಿ, ಹೆಚ್ಚುವರಿ ಪಿಎಸ್ಐ ರವಿ ವಾಲಿಕರ ಉಪಸ್ಥಿತರಿದ್ದರು.