ಕಲ್ಲೋಳಿ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಭಾಭವನದಲ್ಲಿ ಬಸವ ಜಯಂತಿ ಅಂಗವಾಗಿ ಬಸವಣ್ಣನವರ ಭಾವಚಿತ್ರಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಪೂಜೆ ಸಲ್ಲಿಸಿದರು. ಶ್ರೀಶೈಲ ತುಪ್ಪದ, ಪರಪ್ಪ ಗಿರೆಣ್ಣವರ, ಪ್ರಶಾಂತ ಪಟ್ಟಣಶೆಟ್ಟಿ, ದೊಡ್ಡಪ್ಪ ಉಜ್ಜಿನಕೊಪ್ಪ ಇತರರು ಇದ್ದರು. 
ಜಿಲ್ಲೆ

ಎಲ್ಲರೂ ಬಸವಣ್ಣನ ಆದರ್ಶ ಪಾಲಿಸಿ

ಮೂಡಲಗಿ: ಮಹಾಮಾನವತಾವಾದಿ, ವಿಶ್ವಗುರು ಬಸವಣ್ಣನವರು ವರ್ಗ, ವರ್ಣ ರಹಿತ ಸಮಾನತೆಯ ಸಮಾಜದ ಹರಿಕಾರ. ಅವರ ವಚನಗಳು ಸಾರ್ವಕಾಲಿಕ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸ್ಮರಿಸಿದ್ದಾರೆ.

ಕಲ್ಲೋಳಿ ಪಟ್ಟಣದ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಭಾಭವನದಲ್ಲಿ ಬಸವ ಜಯಂತಿ ಅಂಗವಾಗಿ ಶುಕ್ರವಾರ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸಹಕಾರಿ ನಿರ್ದೇಶಕ ಶ್ರೀಶೈಲ ತುಪ್ಪದ, ಪರಪ್ಪ ಗಿರೆಣ್ಣವರ, ಪ್ರಶಾಂತ ಪಟ್ಟಣಶೆಟ್ಟಿ, ದೊಡ್ಡಪ್ಪ ಉಜ್ಜಿನಕೊಪ್ಪ, ವಿಠ್ಠಲ ಜಟ್ಟೆಣ್ಣವರ, ಸಿದ್ದಪ್ಪ ಬೆಳವಿ ಇದ್ದರು.

ಇಟಗಿ ವರದಿ: ಗ್ರಾಮದಲ್ಲಿ ರಾಷ್ಟ್ರೀಯ ಬಸವ ಸೇನೆ ಸಹಯೋಗದಲ್ಲಿ ಬಸವ ಜಯಂತಿ ಆಚರಿಸಲಾಯಿತು. ಸಂತೋಷ ತುರಮರಿ ಮತ್ತು ಅಡಿವೆಪ್ಪ ಕರಮಳ್ಳನವರ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ತಾಲೂಕು ಪಂಚಾಯಿತಿ ಸದಸ್ಯ ಬಸವರಾಜ ಸಾಣಿಕೊಪ್ಪ, ಗ್ರಾಪಂ ಸದಸ್ಯ ಅಶೋಕ ಬೆಣಚಿನಮರಡಿ ಹಾಗೂ ರಾಜು ಸಾಂಬ್ರಾಣಿ, ಬಸವಪ್ರಭು ವಾಲಿ ಇದ್ದರು.

ಹಳ್ಳೂರ ವರದಿ: ಸ್ಥಳೀಯ ಬಸವ ಸಮಿತಿ ಆಶ್ರಯದಲ್ಲಿ ಬಸವ ಜಯಂತಿಯನ್ನು ಶುಕ್ರವಾರ ಸರಳವಾಗಿ ಆಚರಿಸಲಾಯಿತು. ಬಸವೇಶ್ವರ ಮೂರ್ತಿಗೆ ರುದ್ರಾಭೀಷೇಕ, ನಂತರ ಬಸವಣ್ಣನ ತೊಟ್ಟಿಲೋತ್ಸವ ಜರುಗಿತು. ಗ್ರಾಮದಲ್ಲಿರುವ ಎತ್ತುಗಳಿಗೆ ಬಣ್ಣ ದಿಂದ ಅಲಂಕರಿಸಲಾಗಿತ್ತು. ಹನುಮಂತ ತೇರದಾಳ, ಬಸವಣ್ಣೆಪ್ಪ ಡಬ್ಬಣ್ಣವರ, ಭೀಮಶಿ ಡಬ್ಬಣ್ಣವರ, ಮಾರುತಿ ಮಾವರಕರ, ಶಿವಪ್ಪ ಕೌಜಲಗಿ, ಬಸವೇಶ್ವರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ಸಂಘಟಕರು, ಬಸವ ಸಮಿತಿ ಕಾರ್ಯಕರ್ತರು ಇದ್ದರು.