ನಿಪ್ಪಾಣಿ ನಗರದಲ್ಲಿ ಸಸಿ ನೆಡುವ ಮೂಲಕ ಶಾಸಕಿ ಶಶಿಕಲಾ ಜೊಲ್ಲೆ ಸಸ್ಯ ಶಾಮಲೆ ಯೋಜನೆಗೆ ಚಾಲನೆ ನೀಡಿದರು. ಮಹಾದೇವಿ ನಾಯಿಕ, ಮಹಾಲಿಂಗೇಶ ಜೆ., ರಾಜಗೌಡ ಕಾಗೆ ಇತರರಿದ್ದರು. 
ಜಿಲ್ಲೆ

ಎಲ್ಲರೂ ಪ್ರಕೃತಿ ಸಂರಕ್ಷಣೆ ಮಾಡಲಿ

ಸೋಮಲಿಂಗ ತಳವಾರ

ನಿಪ್ಪಾಣಿ: ಪ್ರಕತಿ ಸಂರಣೆ ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ನನ್ನ ೇತ್ರದಲ್ಲಿ 20 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟಿದ್ದೇವೆ. ಹಸಿರನ್ನು ಉಸಿರಾಗಿಸಿಕೊಂಡು, ಮಾನವಕುಲದ ಒಳಿತಿಗಾಗಿ ಪರಿಸರ ಸಂರಸೋಣ ಎಂದು ಶಾಸಕಿ ಶಶಿಕಲಾ ಜೊಲ್ಲೆ ಕರೆ ನೀಡಿದರು.

ಇಲ್ಲಿನ ಅಕ್ಕೋಳ ರಸ್ತೆ ಕ್ರಾಸ್​ನ ಪಾರ್ವತಿ ಕಾರ್ನರ್​ದಿಂದ ಹಾಲಸಿದ್ಧನಾಥ ಮಂದಿರದವರೆಗೆ ಎರಡು ಬದಿಯಲ್ಲಿ ವಿವಿಧ ಪ್ರಕಾರಗಳ ಹೂವಿನ ಸಸಿ ನೆಡುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ 10 ವರ್ಷಗಳಲ್ಲಿ ನಗರದ ಅಭಿವದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕರ್ಷಕ ವಿದ್ಯುತ್​ ದೀಪಗಳನ್ನು ಅಳವಡಿಸಿ ನಗರದ ಸೌಂದರ್ಯ ಹೆಚ್ಚಿಸಲಾಗಿದೆ. ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ೇತ್ರವನ್ನು ಮಾದರಿ ೇತ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸಲಾಗುವುದು. ಅಕ್ಕೋಳ ರಸ್ತೆಯಲ್ಲೂ ಆಕರ್ಷಕ ವಿದ್ಯುತ್​ ದೀಪಗಳನ್ನು ಅಳವಡಿಸಲಾಗುವುದು. ಮತ್ತು ರಸ್ತೆಯ ಎರಡೂ ಬದಿ ಈ ಸಸಿಗಳಿಂದ ನಗರದ ಸೌಂದರ್ಯ ಮತ್ತಷ್ಟು ವೃದ್ಧಿಯಾಗಲಿದೆ ಎಂದರು.

ಸಾಮಾಜಿಕ ವಲಯ ಅರಣ್ಯ ಇಲಾಖೆ ಅಧಿಕಾರಿ ಸಚಿನ ಹೊನಮನಿ, ಪೌರಾಯುಕ್ತ ಜಗದೀಶ ಹುಲಗೆಜ್ಜಿ, ನಗರಸಭೆ ಮಾಜಿ ಅಧ್ಯ ಜಯವಂತ ಭಾಟಲೆ, ನೀತಾ ಬಾಗಡೆ, ರಾಜೇಂದ್ರ ಗುಂದೇಶಾ, ಸಂತೋಷ ಸಾಂಗಾವಕರ, ಆಶಾ ಟವಳೆ, ಪ್ರಭಾವತಿ ಸೂರ್ಯವಂಶಿ, ಸುಜಾತಾ ಕದಮ, ಸೋನಾಲಿ ಉಪಾಧ್ಯೆ, ದೀಪಕ ಮಾನೆ, ಮಹಾದೇವ ಬರಗಾಲೆ ಇತರರು ಇದ್ದರು.