ಜಮಖಂಡಿ: ಅರಣ್ಯ ಒಳಗೊಂಡಂತೆ ಪರಿಸರ ಸುಧಾರಿಸುವುದು ಮತ್ತು ಸಂರಕ್ಷಿಸುವುದು ಭಾರತದ ಸಂವಿಧಾನ ಪರಿಚ್ಛೇದ 51-ಎ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನ ಮೂಲ ಕರ್ತವ್ಯವಾಗಿದೆ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಹಮದ್ ಇಮ್ತಿಯಾಜ್ ಅಹಮದ್ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಆಶ್ರಯದಲ್ಲಿ ನಗರ ಹೊರವಲಯದ ಕಟ್ಟೆಕೆರೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಿಡಮರಗಳನ್ನು ಬೆಳೆಸಿ ಅರಣ್ಯ ಸಂರಕ್ಷಿಸುವುದು ತುಂಬ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪರಿಸರವನ್ನು ಕಾಪಾಡುವ ಕಾಳಜಿ ಹೊಂದಬೇಕಾಗಿದೆ ಎಂದರು.
ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ರಾಜಶೇಖರ ಎಸ್. ಹರಸೂರ ಮಾತನಾಡಿ, ಪರಿಸರಕ್ಕೆ ಮಾನವ ಬೇಕಾಗಿಲ್ಲ. ಬದಲಾಗಿ ಪರಿಸರ ಮಾನವನಿಗೆ ಬೇಕಾಗಿದೆ. ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಪೋಷಿಸಬೇಕಾಗಿದೆ ಎಂದರು.
ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಸುಶಾಂತ ಮಹಾವೀರ ಚೌಗಲೆ, ಪ್ರಧಾನ ಸಿವಿಲ್ ನ್ಯಾಯಾಧೀಶ ಅರ್ಷದ್ ಎ. ಅನ್ಸಾರಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮತ್ತು ಜೆಎಂಎ್ಸಿ ಶ್ರೀದೇವಿ, ವಕೀಲರ ಸಂಘದ ಉಪಾಧ್ಯಕ್ಷ ಎಸ್.ಬಿ. ಕಾಳೆ, ಹಿರಿಯ ವಕೀಲ ಎನ್.ಎಸ್. ದೇವರವರ, ಎಸಿಎ್ (ಸಾಮಾಜಿಕ) ಸೆಲ್ವ್‌ರಾಜ ನಾಯಕರ, ಎಸಿಎ್(ಪ್ರಾದೇಶಿಕ) ಪ್ರದೀಪ ರಾಠೋಡ, ಸಿಪಿಐ ಎಂ.ಡಿ. ಮಡ್ಡಿ, ವಲಯ ಅರಣ್ಯಾಧಿಕಾರಿ ಕಿರಣ ದಾಸರೆಡ್ಡಿ, ಶಹರ ಠಾಣೆ ಪಿಎಸ್‌ಐ ಅನೀಲ ಕುಂಬಾರ, ಗ್ರಾಮೀಣ ಠಾಣೆ ಪಿಎಸ್‌ಐ ಜಿ.ಎಂ. ಪೂಜಾರಿ, ವಕೀಲರಾದ ಎಸ್.ಪಿ. ಪಾರಶೆಟ್ಟಿ, ಪಚ್ಚೆನ್ನವರ ಇದ್ದರು.