ಹುಲಸೂರು: ಜಾತಿ ವಿಷ ಬೀಜವನ್ನು ಬಿತ್ತಿ ಪರಸ್ಪರರಲ್ಲಿ ದ್ವೇಷ ಸೃಷ್ಟಿಸಿ ಸಮಾಜ ಒಡೆಯುವ ವ್ಯವಸ್ಥಿತ ಹುನ್ನಾರ ನಡೆದಿವೆ. ಈ ಬಗ್ಗೆ ಸಮಾಜಕ್ಕೆ ಜಾಗೃತಗೊಳಿಸಬೇಕಿದೆ. ಪ್ರತಿಯೊಬ್ಬರೂ ರಾಷ್ಟç ಮೊದಲು, ಜಾತಿ ನಂತರ ಎಂಬ ತತ್ವಕ್ಕೆ ಬದ್ಧರಾಗಿ ದೇಶವನ್ನು ಕಟ್ಟುವಂಥ ಸಂಕಲ್ಪ ಮಾಡಬೇಕಿದೆ ಎಂದು ಹುಲಸೂರು ಗುರುಬಸವೇಶ್ವರ ಸಂಸ್ಥಾನದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಗುರುಬಸವೇಶ್ವರ ಸಂಸ್ಥಾನದಲ್ಲಿ ಶ್ರಾವಣ ಪ್ರವಚನ ನಿಮಿತ್ತ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಗೌರವ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಎಲ್ಲರಿಗೂ ಅವರವರ ಜಾತಿ, ಧರ್ಮದ ಬಗ್ಗೆ ಅಭಿಮಾನ ಮತ್ತು ಹೆಮ್ಮೆ ಇರಲಿ. ಆದರೆ ಇದಕ್ಕಿಂತ ಮುಖ್ಯವಾಗಿ ರಾಷ್ಟçದ ಬಗ್ಗೆ ಗೌರವ ಇರಬೇಕು. ರಾಷ್ಟç ಮೊದಲು ಉಳಿದೆಲ್ಲವೂ ನಂತರ ಎಂಬ ಭಾವನೆ ಹೊಂದಬೇಕು. ಇದರಿಂದ ಸದೃಢ ಮತ್ತು ಸಶಕ್ತ ಭಾರತ ಕಟ್ಟಲು ಸಾಧ್ಯ ಎಂದು ಹೇಳಿದರು.
ಉದಗೀರ-ಡೋಣಗಾಂವ ಮಠದ ಶ್ರೀ ಶುಂಭುಲಿAಗ ಶಿವಾಚಾರ್ಯರು ಮಾತನಾಡಿ, ರಾಷ್ಟç ಉಳಿದಾಗಲೇ ನಾವು, ನಮ್ಮ ಜಾತಿ ಎಲ್ಲವೂ ಉಳಿಯುತ್ತದೆ. ಹೀಗಾಗಿ ನಾವು ರಾಷ್ಟçದ ಹಿತಕ್ಕೆ ಮೊದಲ ಆದ್ಯತೆ ಕೊಡಬೇಕು. ದೇಶದ ಅಸ್ಮಿತೆ, ಸಮಾಜದ ವ್ಯವಸ್ಥೆಯೇ ಬುಡಮೇಲು ಮಾಡುವ ಷಡ್ಯಂತ್ರ ಇಂದು ನಡೆಯುತ್ತಿವೆ. ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ಮಾಡಿ, ವಾಸ್ತವ ತಿಳಿಸಿಕೊಡುವ ದೊಡ್ಡ ಜವಾಬ್ದಾರಿ ಧರ್ಮ ಗುರುಗಳ ಮೇಲೂ ಇದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ, ಅರಾಜಕತೆ ಸ್ಥಿತಿ ನಿರ್ಮಾಣ ಮಾಡುವ ಸಮಾಜಘಾತುಕ ಶಕ್ತಿಗಳು ನಮ್ಮ ಸುತ್ತಮುತ್ತಲೇ ಸಕ್ರಿಯವಾಗಿವೆ. ಆಪತ್ತು ಇದೀಗ ನಮ್ಮ ಮನೆಗಳ ಬಾಗಿಲಿಗೆ ಬಂದು ನಿಂತಿದೆ. ನೆರೆಯ ಬಾಂಗ್ಲಾ ದೇಶದಲ್ಲಿನಂಥ ಪರಿಸ್ಥಿತಿ ನಮ್ಮಲ್ಲೂ ಉದ್ಭವವಾಗಬಹುದು ಎಂದು ನಮ್ಮವರೇ ಹೇಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಸಾಹಿತಿ, ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ಜೀವನ ದರ್ಶನ ಕುರಿತು ಪ್ರವಚನ ನೀಡಿದರು. ಸುಕ್ಷೇತ್ರ ಕೇದಾರದಲ್ಲಿ 21 ದಿವಸ ಅನುಷ್ಠಾನ ಕೈಗೊಂಡ ಡೋಣಗಾಂವ ಶ್ರೀ ಶುಂಭುಲಿAಗ ಶಿವಾಚಾರ್ಯ, ಸಾಯಗಾಂವ ಶ್ರೀ ಶಿವಾನಂದ ಸ್ವಾಮೀಜಿ ಮತ್ತು ಹಿರಿಯ ಪತ್ರಕರ್ತ ಸದಾನಂದ ಜೋಶಿ ಅವರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.
ಬಾಬುರಾವ ಗೌಂಡಗಾವೆ ಪ್ರಾಸ್ತಾವಿಕ ಮಾತನಾಡಿದರು. ಪ್ರೇಮ ಗೌಂಡಗಾವೆ, ವೀರೇಶ ಮಠಪತಿ ಸಂಗೀತ ಸೇವೆ ನಡೆಸಿಕೊಟ್ಟರು. ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ಚಂದ್ರಶೇಖರ ತೋಗರಗೆ ಇತರರಿದ್ದರು . ಗದಗಯ್ಯ ಮಠಪತಿ ಸ್ವಾಗತಿಸಿ, ನಿರೂಪಣೆ ಮಾಡಿದರು.