ಜಿಲ್ಲೆ

ಎಲ್ಲರೂ ಕಾನೂನು ಅರಿಯುವುದು ಅಗತ್ಯ

ಸುರಪುರ : ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯವಾಗಿದೆ ಎಂದು ಸಿವಿಲ್ ನ್ಯಾಯಾಧೀಶ ಮಾರುತಿ ಕೆ. ಹೇಳಿದರು.
ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಾದಕ ದ್ರವ್ಯ ಸೇವನೆ ನಿಷೇಧ ದಿನ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಕಾನೂನು ಅರಿವು ಕರ‍್ಯಕ್ರಮ ಉದ್ಘಾಟಿಸಿದ ಅವರು, ಕಾನೂನು ಕೊರತೆಯಿಂದ ಅಪರಾಧ ಘಟಿಸಿದರೆ ಕ್ಷಮೆ ಇಲ್ಲ. ಹೀಗಾಗಿ ಪ್ರತಿಯೊಬ್ಬರೂ ಕಾನೂನು ಬಗ್ಗೆ ಜ್ಞಾನ ಹೊಂದಬೇಕು ಎಂದರು.

ಸಂವಿಧಾನದ ಆಶಯದಂತೆ ನಮ್ಮ ಹಕ್ಕುಗಳ ಜತೆ ಕರ್ತವ್ಯಗಳ ಜವಾಬ್ದಾರಿಯೂ ಬೇಕು. ಹಾಗಾಗಿ ಎಲ್ಲರಿಗೂ ಕಾನೂನಿನ ಬಗ್ಗೆ ಅರಿವು ಮೂಡಿಸಲು ನ್ಯಾಯಾಂಗ ಇಲಾಖೆ ಸತತವಾಗಿ ಶ್ರಮಿಸುತ್ತಿದೆ. ಎಲ್ಲರೂ ಕಾನೂನು ಗೌರವಿಸಿ, ಪಾಲನೆ ಮಾಡಬೇಕು. ಮಾದಕ ವಸ್ತುಗಳ ದುರಪಯೋಗ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಅಬಕಾರಿ ಉಪ ನಿರೀಕ್ಷಕಿ ಪೂಜಾ ಖರ್ಗೆ ಮಾತನಾಡಿದರು. ಹೆಚ್ಚುವರಿ ನ್ಯಾಯಾಧೀಶ ಬಸವರಾಜ, ವಕೀಲ ಸಂಘದ ತಾಲೂಕು ಅಧ್ಯಕ್ಷ ರಮಾನಂದ ಕವಲಿ, ಹಿರಿಯ ವಕೀಲ ಮಲ್ಲಿಕಾರ್ಜುನಯ್ಯ ಹಿರೇಮಠ, ಪ್ರಾಚಾರ್ಯ ಡಾ.ಶರಣಬಸಪ್ಪ ಸಾಲಿ, ಪ್ರೊ.ಸಿದ್ದನಗೌಡ ಪಾಟೀಲ್, ಡಾ.ಅಶೋಕ ಪಾಟೀಲ್, ಪ್ರೊ.ಶರಣಗೌಡ ಪಾಟೀಲ್, ಪ್ರೊ.ಗಂಗಾಧರ ಹೂಗಾರ ಇತರರಿದ್ದರು.