ಕೊಡೇಕಲ್: ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಂಚೆ ಕಚೇರಿಯಲ್ಲಿ ವ್ಯವಹರಿಸುವ ಮೂಲಕ ಇಲಾಖೆಗೆ ಸಹಕರಿಸಬೇಕು ಎಂದು ಸುರಪುರ ಅಂಚೆ ಇಲಾಖೆ ನಿರೀಕ್ಷಕ ವಂಶಿ ರಾಮಕೃಷ್ಣ ಹೇಳಿದರು. ಅಮ್ಮಾಪುರ ಎಸ್.ಕೆ. ಗ್ರಾಮದಲ್ಲಿ ಶುಕ್ರವಾರ ನೂತನ ಶಾಖೆ ಉದ್ಘಾಟಿಸಿದ ಅವರು, ಅಂಚೆ ಇಲಾಖೆಯಿಂದ ಹಲವು ಯೋಜನೆಗಳು ಜನರಿಗೆ ಲಭಿಸುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು. ಊರಲ್ಲಿ ಹಲವು ವರ್ಷಗಳ ಹಿಂದೆಯೇ ಈ ಕಚೇರಿ ತೆರೆಯಬೇಕಿತ್ತು. ಆದರೆ ಕಾರಣಾಂತರಗಳಿAದ ವಿಳಂಬವಾಗಿದೆ ಎಂದರು. ಅಂಚೆ ಇಲಾಖೆ ಅಧಿಕಾರಿ ಅಶ್ವಿನಿ, ಲಕ್ಷö್ಮಣ, ಪ್ರಮುಖರಾದ ಬಾಲಗೌಡ ಪೊಲೀಸ್ ಪಾಟೀಲ್, ಗ್ರಾಪಂ ಕರ‍್ಯದರ್ಶಿ ರವಿಶಂಕರ ಅಡ್ಡಿ, ಶಿವಕುಮಾರ ಇತರರಿದ್ದರು.