ಜಿಲ್ಲೆ

ಎಲ್ಲರಿಗೂ ಸ್ವಚ್ಛತೆಯ ಅರಿವು ಮೂಡಿಸಿ

ಪಾತಪಾಳ್ಯ: ಪ್ರಕೃತಿ ವಿರುದ್ಧವಾಗಿ ಪ್ರತಿಕ್ರಿಯಿಸಿದಾಗ ಅದು ಮನುಷ್ಯನ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಎಲ್ಲರೂ ಪರಿಸರ ರಕ್ಷಣೆಗೆ ಆದ್ಯತೆ ನೀಡಿ ಎಂದು ಗ್ರಾಮ ಪಂಚಾಯಿತಿ ಅಧ್ಯೆ ನಿರ್ಮಲಾ ತಿಳಿಸಿದರು. ಬಂದಾರ್ಲಪಲ್ಲಿಯಲ್ಲಿ ಮಂಗಳವಾರ ಬಿಳ್ಳೂರು ಗ್ರಾಮ ಪಂಚಾಯಿತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರವನ್ನು ಹಾಳುಗೆಡದೆ ಶುಚಿತ್ವ ಕಾಪಾಡಿ. ಪ್ಲಾಸ್ಟಿಕ್​, ತ್ಯಾಜ್ಯದಿಂದ ಅನೇಕ ರೋಗಗಳು ಸೃಷ್ಟಿಯಾಗುತ್ತಿವೆ.ಹಾಗಾಗಿ ಆಂತರಿಕ ಸ್ವಚ್ಛತೆ ಎಷ್ಟು ಮುಖ್ಯವೂ, ಬಾಹ್ಯ ಸ್ವಚ್ಛತೆಯೂ ಅಷ್ಟೇ ಮುಖ್ಯ. ಇದರ ಬಗ್ಗೆ ಪ್ರತಿಯೊಬ್ಬರೂ ಅರಿವು ಮೂಡಿಸಬೇಕು ಎಂದರು. ಪಿಡಿಒ ವಿ.ಭಾಗ್ಯಲಕ್ಷಿ$್ಮ ಮಾತನಾಡಿ ಗ್ರಾಮ ನೈರ್ಮಲ್ಯ ಕಾಪಾಡಿದಾಗ ರೋಗಗಳಿಂದ ಮುಕ್ತರಾಗಬಹುದು. ಗ್ರಾಮ ನೈರ್ಮಲ್ಯ ಕಾಪಾಡಲು ಗ್ರಾಮ ಪಂಚಾಯಿತಿಯಿಂದ ಕಸದ ಬುಟ್ಟಿ ನೀಡಿದ್ದು, ಕಸವನ್ನು ರಸ್ತೆಗೆ ಎಸೆಯದೆ ಬುಟ್ಟಿಯಲ್ಲಿ ಹಾಕಬೇಕು.ಗ್ರಾಮ ಸ್ವಚ್ಛತೆ ಜತೆಗೆ ಪರಸರ ಅಭಿವೃದ್ಧಿ, ನೀರಿನ ರಕ್ಷಣೆಗೆ ಒತ್ತು ನೀಡಬೇಕು ಎಂದರು.