ಸಾಗರದ ನೆಹರು ನಗರದಲ್ಲಿ ಮದರ್ ತೆರೇಸಾ ಕೌಶಲ ತರಬೇತಿ ಸಂಸ್ಥೆಯಿಂದ ಸ್ವಯಂ ಉದ್ಯೋಗ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಮರಿಯಾ ಲೀಮಾ, ಗಣಪತಿ ಮಂಡಗಳಲೆ, ಐ.ಎನ್.ಸುರೇಶಬಾಬು ಇತರರಿದ್ದರು. 
ಜಿಲ್ಲೆ

ಎಲ್ಲರಿಗೂ ಸರ್ಕಾರಿ ನೌಕರಿ ಅಸಾಧ್ಯ

ಸಾಗರ: ಸರ್ಕಾರಿ ನೌಕರಿಯನ್ನು ಎಲ್ಲರೂ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಯುವಜನರು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳುವ ಮನಸ್ಸು ಮಾಡಬೇಕು. ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಸಬಲೀಕರಣ ಸಾಧ್ಯ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಸೂಕ್ತ ತರಬೇತಿ ನೀಡಿದರೆ ಅವರು ಆರ್ಥಿಕ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡುತ್ತಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಸಾಗರದ ನೆಹರು ನಗರದಲ್ಲಿ ಶನಿವಾರ ಮದರ್ ತೆರೇಸಾ ಕೌಶಲ ತರಬೇತಿ ಸಂಸ್ಥೆಯು ಮಹಿಳೆಯರಿಗೆ ನೀಡಿದ ವಿವಿಧ ಸ್ವಯಂ ಉದ್ಯೋಗ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೆಹಂದಿ ಹಾಕುವುದು, ಟೈಲರಿಂಗ್, ಮೇಣದ ಬತ್ತಿ ತಯಾರಿಕೆ ಸೇರಿ ವಿವಿಧ ವೃತ್ತಿಗಳ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ತರಬೇತಿ ಪಡೆದ ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳುವ ಜತೆಗೆ ಇತರರಿಗೂ ಉದ್ಯೋಗ ನೀಡುವ ಉದ್ಯೋಗದಾತರಾಗಬೇಕು. ನೀವು ಕಲಿತಿದ್ದನ್ನು ಇನ್ನೊಬ್ಬರಿಗೆ ಕಲಿಸುವ ಮೂಲಕ ಉದ್ಯೋಗಸ್ಥರ ಸಂಖ್ಯೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು. ಮದರ್ ತೆರೇಸಾ ಸಂಸ್ಥೆಯ ಮರಿಯಾ ಲೀಮಾ ಮತ್ತವರ ತಂಡ ಅನೇಕ ವರ್ಷಗಳಿಂದ ಮಹಿಳಾ ಸಬಲೀಕರಣದ ಉದ್ದೇಶ ಇರಿಸಿಕೊಂಡು ಕೆಲಸ ಮಾಡುತ್ತಿದೆ. ಸಣ್ಣಸಣ್ಣ ಉದ್ಯಮಕ್ಕೂ ಹೆಚ್ಚಿನ ಬೆಲೆ ಇದೆ ಎನ್ನುವುದನ್ನು ಇಂತಹ ಸಂಸ್ಥೆಗಳ ಕಾರ್ಯವೈಖರಿಯಿಂದ ತಿಳಿದುಬರುತ್ತದೆ. ಈತನಕ ಸಂಸ್ಥೆಯಿಂದ 35 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಿರುವುದು ಗಮನಾರ್ಹ ಸಾಧನೆ. ರಾಜ್ಯ ಸರ್ಕಾರ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡುವ ಯೋಜನೆ ಜಾರಿಗೆ ತಂದಿದ್ದು ಮಹಿಳೆಯರು ಇದರ ಪ್ರಯೋಜನ ಪಡೆಯಬೇಕು ಎಂದರು. ಸಂಸ್ಥೆ ಮುಖ್ಯಸ್ಥೆ ಮರಿಯಾ ಲೀಮಾ, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಐ.ಎನ್.ಸುರೇಶಬಾಬು, ಶೀತಲ್, ಇಸ್ಮಾಯಿಲ್ ಅಂಕರವಳ್ಳಿ ಇತರರಿದ್ದರು. ಕರಾಟೆ ಕ್ರೀಡಾಪಟು ಮಹಮ್ಮದ್ ರಿಯಾನ್ ಅವರನ್ನು ಸನ್ಮಾನಿಸಲಾಯಿತು.

ಕಳೆದ ಹದಿನೈದು ವರ್ಷಗಳಿಂದ ಮದರ್ ತೆರೇಸಾ ಸಂಸ್ಥೆ ಮೂಲಕ ಮರಿಯಾ ಲೀಮಾ ನೇತೃತ್ವದಲ್ಲಿ ವಿವಿಧ ವೃತ್ತಿ ತರಬೇತಿ ನೀಡಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲಾಗುತ್ತಿದೆ. ಅನೇಕ ಬಗೆಯ ತರಬೇತಿ ನೀಡಿ ಅವರ ಕಾರ್ಯಕ್ಷಮತೆ ಹೆಚ್ಚಿಸಲಾಗಿದೆ. ಜಲಾನಯನ ಯೋಜನೆಯಡಿ ಸಂಸ್ಥೆಯಿಂದ 5 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಿದ್ದು, ನಗರ ಹಾಗೂ ಗ್ರಾಮಾಂತರ ಮಹಿಳೆಯರು ತರಬೇತಿ ಪಡೆದು ಈಗ ಸ್ವಯಂ ಉದ್ಯೋಗ ನಡೆಸುತ್ತಿದ್ದಾರೆ. ವಿನಾಯಕ ಬೇಳೂರು, ಕೃಷಿ ಇಲಾಖೆ ವ್ಯವಸ್ಥಾಪಕ