ಕೊಳ್ಳೇಗಾಲ: ಪಟ್ಟಣದ ಬಸ್ತೀಪುರದ 10ನೇ ಕ್ರಾಸ್ ಭೀಮ ಮಾರ್ಗ ನಿವಾಸಿಗಳು ಬುಧವಾರ ಡಾ.ಬಿ. ಆರ್.ಅಂಬೇಡ್ಕರ್ ಅವರ 134 ನೇ ಜಯಂತಿ ಕಾರ್ಯಕ್ರಮ ಆಯೋಜಿಸಿದ್ದರು.
ನಗರಸಭೆ ಸದಸ್ಯ ಶಾಂತರಾಜು ಮಾತನಾಡಿ, ಸಂವಿಧಾನವನ್ನು ಪ್ರತಿಯೊಬ್ಬರು ಓದಬೇಕು. ಬಾಬಾ ಸಾಹೇಬರ ತತ್ವ ಹಾಗೂ ಆದರ್ಶಗಳನ್ನು ಪಾಲಿಸಬೇಕಿದೆ. ಅಂಬೇಡ್ಕರ್ ಅವರು ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕೆಂದು ಹೋರಾಟ ಮಾಡಿದರು. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳು ಹಾಗೂ ಅವಕಾಶಗಳನ್ನು ನೀಡಿದರು ಎಂದರು.
ರೈತ ಮುಖಂಡ ಅಣಗಳ್ಳಿ ಬಸವರಾಜು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಸಾವಿರಾರು ಪುಸ್ತಕಗಳನ್ನು ಓದಿ ಜ್ಞಾನವನ್ನು ಪಡೆದರು. ಸಂವಿಧಾನ ಬರೆದು ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದರು. ಮಕ್ಕಳಿಗೆ ಅಂಬೇಡ್ಕರ್ ಅವರ ವಿಚಾರಧಾರೆ, ಹೋರಾಟದ ಬಗ್ಗೆ ತಿಳಿಸುವುದರ ಜತೆಗೆ ಚೆನ್ನಾಗಿ ಓದಿಸಬೇಕೆಂದರು.
ಬಸ್ತೀಪುರ ಬಡಾವಣೆಯ ಅಂಬೇಡ್ಕರ್ ಸಂಘದ ಅಧ್ಯಕ್ಷ ಪ್ರಕಾಶ್ ಮಾತನಾಡಿದರು. ನಗರಸಭೆ ಸದಸ್ಯ ಶಾಂತರಾಜು, ಸ್ವಾಮಿ ನಂಜಪ್ಪ, ಬಸ್ತೀಪುರ ಅಂಬೇಡ್ಕರ್ ಸಂಘದ ಅಧ್ಯಕ್ಷ ಪ್ರಕಾಶ್, ಭೀಮನಗರದ ಡಾ.ಬಿ.ಆರ್.ಅಂಬೇಡ್ಕರದ ಸ್ಮಾರಕ ಸಂಘದ ಕಾರ್ಯದರ್ಶಿ ಪಾಪಣ್ಣ ಉಪಾಧ್ಯಕ್ಷ ಕಿರಣ್, ಸಹ ಕಾರ್ಯದರ್ಶಿ ಶಶಿಧರ್, ಖಜಾಂಚಿ ರಾಜೇಶ್, ಪ್ರಗತಿಪರ ಸಂಘಟನೆಯ ದಿಲೀಪ್ ಸಿದ್ದಪ್ಪಾಜಿ, ಕರವೇ(ಪ್ರವೀಣ್ ಶೆಟ್ಟಿ) ತಾಲೂಕು ಅಧ್ಯಕ್ಷ ಜಗದೀಶ್ ಶಾಸ್ತ್ರಿ, ಆಯೋಜಕರಾದ ಚೇತನ್‌ಮೂರ್ತಿ, ಅಭಿ, ಚೇತನ್ ಇತರರಿದ್ದರು.